ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಶಾಸಕ ರಾಮಲಿಂಗರೆಡ್ಡಿ ಭೇಟಿ, ಚರ್ಚೆ…

ಬೆಂಗಳೂರು,ಜು,20,2019(www.justkannada.in):  ರಾಜ್ಯಸಮ್ಮಿಶ್ರ ಸರ್ಕಾರವನ್ನ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷದ ನಾಯಕರು ತೀವ್ರ ಕಸರತ್ತು ನಡೆಸುತ್ತಿದ್ದು, ಈ ನಡುವೆ ಕಾಂಗ್ರೆಸ್ ಶಾಸಕ ರಾಮಲಿಂಗರೆಡ್ಡಿ ಅವರು ಮಾಜಿ ಪ್ರಧಾನಿ ಅವರನ್ನ ಭೇಟಿಯಾಗಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಶಾಸಕರ ರಾಮಲಿಂಗರೆಡ್ಡಿ ಭೇಟಿ ನೀಡಿದ್ದಾರೆ. ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಆಗಮಿಸುವಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಶಾಸಕ ರಾಮಲಿಂಗರೆಡ್ಡಿ ಅವರಿಗೆ ಆಹ್ವಾನಿಸಿದ್ದರು. ಹೀಗಾಗಿ ರಾಮಲಿಂಗರೆಡ್ಡಿ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಹ ಉಪಸ್ಥಿತರಿದ್ದಾರೆ ಎನ್ನಲಾಗಿದೆ.

ಇನ್ನು ಉಭಯ ನಾಯಕರು ಕಳೆದ 1 ಗಂಟೆಗಳಿಂದ ಚರ್ಚೆ ನಡೆಸುತ್ತಿದ್ದಾರೆ. ಸೋಮವಾರ ವಿಶ್ವಾಸಮತಯಾಚನೆ ಸುಲಭವಲ್ಲವೆಂದು ಸಿಎಂಗೆ ಮನವರಿಕೆಯಾಗಿದ್ದು ಈ ಹಿನ್ನೆಲೆ ಅತೃಪ್ತ ಶಾಸಕರ ಮನವೊಲಿಸುತ್ತಾರಾ ಅಥವಾ ಬೇರೆ ಮಾರ್ಗ ಅನುಸರಿಸುತ್ತಾರೆಯೇ ಕಾದು ನೋಡಬೇಕು.

Key words: MLA Ramalingareddy –visits- former prime minister HD Deve Gowda- residence