Tuesday, August 18, 2026

BDA Apartments

Home Front Page ಮುಡಾ ಅಧ್ಯಕ್ಷ ಸ್ಥಾನ ನೀಡಲು ನೀವು ಎಷ್ಟು ಹಣಕ್ಕೆ ಸೇಲ್ ಆಗಿದ್ರಿ ಎಂದು ಸವಾಲು ಹಾಕಿದ್ದ...

ಮುಡಾ ಅಧ್ಯಕ್ಷ ಸ್ಥಾನ ನೀಡಲು ನೀವು ಎಷ್ಟು ಹಣಕ್ಕೆ ಸೇಲ್ ಆಗಿದ್ರಿ ಎಂದು ಸವಾಲು ಹಾಕಿದ್ದ  ಹೆಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿಗೆ ತಿರುಗೇಟು ನೀಡಿದ ಸಚಿವ ಸಾ.ರಾ ಮಹೇಶ್….

ಬೆಂಗಳೂರು,ಜು,20,2019(www.justkannada.in): ಮುಡಾ ಅಧ್ಯಕ್ಷ ಸ್ಥಾನ ನೀಡಲು ನೀವು ಎಷ್ಟು ಹಣಕ್ಕೆ ಸೇಲ್ ಆಗಿದ್ರಿ ಎಂದು ಸವಾಲು ಹಾಕಿದ್ದ ಶಾಸಕ ಹೆಚ್.ವಿಶ್ವನಾಥ್  ಪುತ್ರ ಅಮಿತ್ ದೇವರಹಟ್ಟಿಗೆ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸಾ.ರಾ ಮಹೇಶ್,  ಒಂದು ಪಕ್ಷದಲ್ಲಿ ಗೆದ್ದು ರಾಜೀನಾಮೆ ನೀಡದೆ ಇನ್ನೊಂದು ಪಕ್ಷದಲ್ಲಿದ್ದು  ಗುರ್ತಿಸಿಕೊಂಡಿರುವವರ ಬಗ್ಗೆ ರಿಯಾಕ್ಟ್  ಮಾಡೋಕ್ ಆಗತ್ತಾ..? ದಾರಿಯಲ್ಲಿ ಹೋಗೋರೆಲ್ಲಾ ನನ್ನ ಬಗ್ಗೆ ಮಾತನಾಡಿದ್ರೆ ನಾನು ರಿಯಾಕ್ಟ್ ಮಾಡ್ಲಾ? ಆನೆ ಹೋಗೊವಾಗ ನಾಯಿಗಳು ಬೊಗಳುತ್ತವೆ. ನಾನ್ಯಾಕೆ ತಲೆ ಕೆಡಿಸಿಕೊಳ್ಳಲು ಎಂದು ಹಳ್ಳಿಹಕ್ಕಿ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ವಿರುದ್ದ ಗುಡುಗಿದರು.

ಮೊದಲು ಅವರಪ್ಪ ಸದನಕ್ಕೆ ಬಂದು ನನ್ನ ವಿರುದ್ದ ಹಕ್ಕು ಚ್ಯೂತಿ ಮಂಡಿಸಲಿ ಆಮೇಲೆ ನನ್ನ ವಿರುದ್ದ ಮಾತನಾಡ್ಲಿ ಎಂದು ಅಮಿತ್ ದೇವರಹಟ್ಟಿಗೆ ಪರೋಕ್ಷವಾಗಿ ಕುಟುಕಿದರು.

ಹಾಗೆಯೇ  ಒಂದು ವೇಳೆ ವಿಶ್ವನಾಥ್ ಸದನದಲ್ಲಿ ಸಾಬೀತು ಮಾಡಿದ್ರೆ, ಸದನದಲ್ಲೆ ರಾಜೀನಾಮೆ ಕೊಟ್ಟು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾವು ಈಗಾಗಲೇ ನೊಂದಿದ್ದೇವೆ ನಿಮ್ಮ ಆಟ ನಿಲ್ಲಿಸಿ ನೀವು ರಾಜಕಾರಣದಲ್ಲಿ ವ್ಯಭಿಚಾರ ಮಾಡುತ್ತಿದ್ದೀರಿ. ಇದನ್ನ ಜನ ಸಹಿಸೋದಿಲ್ಲ ಎಂದು ಸಚಿವ ಸಾ.ರಾ ಮಹೇಶ್ ಕಿಡಿಕಾರಿದರು.

ನಿನ್ನೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ  ಸಚಿವ ಸಾ.ರ.ಮಹೇಶ್ ಅವರು ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ವಿರುದ್ದ  ಬಿಜೆಪಿಯಿಂದ ಕಪ್ಪ ಪಡೆದ ಆರೋಪ ಮಾಡಿದ್ದರು. ಸಚಿವ  ಸಾ.ರಾ ಮಹೇಶ್ ಆರೋಪ ಕುರಿತು ಜಸ್ಟ್ ಕನ್ನಡ ಡಾಟ್ ಇನ್ ಗೆ ಪ್ರತಿಕ್ರಿಯಿಸಿದ್ದ ಹೆಚ್.ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷರನ್ನು ನೇಮಕ ಮಾಡುವ ಸಂದರ್ಭದಲ್ಲಿ ಎಷ್ಟು ಹಣವನ್ನು ಪಡದಿದ್ದಾರೆ ಎಂಬುದನ್ನು ಸಹ ಮಕ್ಕಳ ಮೇಲೆ, ಅವ್ರ ಮೇಲೆ ಆಣೆ ಹಾಕಿಕೊಂಡು ಹೇಳಲಿ ಎಂದು ಕಿಡಿಕಾರಿದ್ದರು.

Key words: mysore-minister-sa ra Mahesh- tong- h.vishwanath –son –amith devarahatti