ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಕೇಂದ್ರಕ್ಕೆ ಸಂಪೂರ್ಣ ವರದಿ ನೀಡಿದ ರಾಜ್ಯಪಾಲರು…

ಬೆಂಗಳೂರು,ಜು,20,2019(www.justkannada.in): ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಕುರಿತು ರಾಜ್ಯಪಾಲ ವಜುಭಾಯಿ ವಾಲಾ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ವರದಿ ರವಾನೆ ಮಾಡಿದ್ದಾರೆ.

ಕಳೆದ ಎರಡು ದಿನಗಳ ವಿಧಾನಸಭಾ ಕಲಾಪದಲ್ಲಿ ರಾಜಭವನದ ಅಧಿಕಾರಿಗಳು ಉಪಸ್ಥಿತರಿದ್ದರು. ಇವರುನೀಡಿರುವ ವರದಿ ಆಧರಿಸಿ ರಾಜ್ಯ ರಾಜಕೀಯವಿದ್ಯಮಾನ ಕುರಿತು  ಕೇಂದ್ರ ಗೃಹ ಕಾರ್ಯದರ್ಶಿಗೆ ವರದಿ ನೀಡಿದ್ದಾರೆ. ವಿಶ್ವಾಸಮತಯಾಚನೆಗೆ  ಸಿಎಂಗೆ ಎರಡು ಸಾರಿ ಆದೇಶ ನೀಡಲಾಗಿತ್ತು. ಆದರೆ ಆದೇಶವನ್ನ ಉಲ್ಲಂಘನೆ ಮಾಡಿದ್ದಾರೆ.   ಎಂದು ತಾವು ನೀಡಿರುವ ವರದಿಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಉಲ್ಲೇಖಿಸಿದ್ದಾರೆ.

ಹಾಗೆಯೇ ಸಂವಿಧಾನದಂತೆ ಸರ್ಕಾರ ನಡೆಯುತ್ತಿಲ್ಲ. ಸಂವಿಧಾನದಂತೆ ವಿಶ್ವಾಸ ಮತ ಪಡೆದು ಸರ್ಕಾರ ನಡೆಸಬೇಕು. ರಾಜ್ಯಪಾಲರ ಅಧಿಕಾರ ಪ್ರಯೋಗ ಕುರಿತು ಮಾರ್ಗದರ್ಶನವನ್ನ ರಾಜ್ಯಪಾಲರು ಕೇಂದ್ರದಿಂದ ಬಯಸಿದ್ದಾರೆ.

Key words: governor- gave – full report – Center -State Political