ಬೆಂಗಳೂರು,ಅಕ್ಟೋಬರ್,10,2026 (www.justkannada.in): ಮೈಸೂರಿನಲ್ಲಿ ಮಹಿಷಾ ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಛಲವಾದಿ ನಾರಾಯಸ್ವಾಮಿ, ಕೆಲವು ವ್ಯಕ್ತಿಗಳು ಚರಿತ್ರಾರ್ಹವಾಗಿ ಬಂದಿಲ್ಲ. ಕೆಲವರು ಇತ್ತೀಚೆಗೆ ಇಲ್ಲದ ವ್ಯವಸ್ಥೆಯನ್ನು ಮಾಡಲು ಹೊರಟಿದ್ದಾರೆ. ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಬಾರದು. ತಲಾ ತಲಾಂತರದಿಂದ ಬಂದಿರುವುದಕ್ಕೆ ಯಾರೂ ವಿರೋಧಿಸಲ್ಲ. ಇಂತಹದ್ದಕ್ಕೆಲ್ಲ ಅವಕಾಶ ಕೊಡುವುದು ಸರಿಯಲ್ಲ ಎಂದರು.
ಸಿಜೆಪಿ ನಾಯಕರನ್ನ ದೆಹಲಿ ಪೊಲೀಸರು ಬಂಧಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸರ್ಕಾರ ಹೆದರಿಲ್ಲ. ಇದರ ಬಗ್ಗೆ ತಪ್ಪಾಗಿ ಅರ್ಥೈಸಬೇಕಿಲ್ಲ. ಸಿಜೆಪಿ ಮುಖಂಡರ ಜೊತೆ ದೇಶ ವಿರೋಧಿ ಶಕ್ತಿಗಳ ಹೋರಾಟ ಮಾಡುತ್ತಿವೆ. ಇದೆಲ್ಲವನ್ನೂ ಕೇಂದ್ರ ಸರ್ಕಾರ ಗಮನಿಸಿದೆ. ಸಿಇಸಿ ಜ್ಞಾನೇಶ್ ಕುಮಾರ್ ಅವರದ್ದು ಸಾಂವಿಧಾನಿಕ ಹುದ್ದೆ. ತಪ್ಪಾಗಿದ್ದರೇ ಕೋರ್ಟ್ ಮೊರೆ ಹೋಗಬಹುದು. ಎಸ್ ಐಆರ್ ಮಾಡಬೇಡಿ ಎಂದು ಪ್ರಕಾಶ್ ರಾಜ್ ಹೇಳ್ತಾರೆ. ಸತ್ತವರು ಹೆಸರು ಹಾಗೆಯೇ ಇರಬೇಕು ಅಂತೀರಾ? ಜ್ಞಾನೇಶ್ ಕುಮಾರ್ ಮಾಡಿದ್ದ ತಪ್ಪಿನ ಬಗ್ಗೆ ತಿಳಿಸಿ ಎಂದರು.






