ಬೆಂಗಳೂರು,ಅಕ್ಟೋಬರ್,10,2026 (www.justkannada.in): ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸಚಿವರಿಗೆ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಸುರೇಶ್,, ಅತಿಶೀಘ್ರದಲ್ಲೇ ಸತ್ಯಾಸತ್ಯತೆಗಳು ಹೊರ ಬರಲಿದೆ.. ಕೇಂದ್ರ ಸಚಿವರು ಇರಬಹುದು ಅಥವಾ ಬೇರೆ ಯಾರೋ ಇರಬಹುದು ಯಾರು ಇರಲಿದ್ದಾರೆ ಅನ್ನೋದರ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಇದೊಂದು ದೊಡ್ಡ ಪೆಡಂಭೂತ ಅಂತಾ ಚರ್ಚೆ ಮಾಡುತ್ತಿದ್ದಾರೆ. ಕೆಲವೊಬ್ಬರು ಆರೋಫ ಮಾಡೋಕೆ ಅದೇ ಕೆಲಸ ಮಾಡುತ್ತಿದ್ದಾರೆ ಎಲ್ಲವನ್ನೂ ಬಿಟ್ಟು 3 ದಿನಕ್ಕೊಮ್ಮೆ ಅದೇ ಕೆಲಸ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ನಿಗಾ ವಹಿಸಬೇಕಾದ್ದು ಸರ್ಕಾರದ ಕೆಲಸ. ಇದರಲ್ಲಿ ಯಾರ್ಯಾರು ಇದ್ದಾರೆ ಅನ್ನೋದರ ಬಗ್ಗೆ ತನಿಖೆಯಾಗಬೇಕು. ಕೆಲವರಿಗೆ ಹುಚ್ಚು ಹಿಡಿದಿದೆ, ಅಂತವರಿಗೆ ಟ್ರೀಟ್ ಮೆಂಟ್ ಆಗಬೇಕು ಎಂದು ಟಾಂಗ್ ಕೊಟ್ಟರು.






