Saturday, October 10, 2026

BDA Apartments

Home Front Page ಕರ್ತವ್ಯದ ವೇಳೆ ಮದ್ಯ ಸೇವಿಸಿದ್ದ ಹೆಡ್ ಕಾನ್ಸ್ ಟೇಬಲ್ ಸಸ್ಪೆಂಡ್

ಕರ್ತವ್ಯದ ವೇಳೆ ಮದ್ಯ ಸೇವಿಸಿದ್ದ ಹೆಡ್ ಕಾನ್ಸ್ ಟೇಬಲ್ ಸಸ್ಪೆಂಡ್

ಕಲಬುರಗಿ,ಅಕ್ಟೋಬರ್,10,2026 (www.justkannada.in): ಕರ್ತವ್ಯದ ವೇಳೆ ಮದ್ಯ ಸೇವಿಸಿದ್ದ ಹೆಡ್ ಕಾನ್ಸ್ ಟೇಬಲ್ ವೊಬ್ಬರನ್ನ ಕಲಬುರಗಿ ಎಸ್ ಪಿ  ಅಡ್ಡೂರು ಶ್ರೀನಿವಾಸಲು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕು  ಮಹಾಂಗಾವ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಹಣಮಂತು ಅಮಾನತಾದವರು. ಮಹಾಂಗಾವ್ ಠಾಣಾ ವ್ಯಾಪ್ತಿಯ ಹರಸೂರು ಗ್ರಾಮದಲ್ಲಿ ಗಲಾಟೆಯಾಗಿತ್ತು.  ಈ ವೇಳೆ ಬಂದೋಬಸ್ತ್ ಗೆ ಹಣಮಂತ ಅವರನ್ನ ನಿಯೋಜನೆ ಮಾಡಲಾಗಿತ್ತು. ಆದರೆ ಕರ್ತವ್ಯದ ವೇಳೆ ಹಣಮಂತ ಮದ್ಯ ಸೇವಿಸಿದ್ದರು.  ಮಸೀದಿ ಛಾವಣಿ ಮೇಲೆ ನಿಂತು ಮದ್ಯ  ಸೇವಿಸಿದ್ದರು.Head constable suspended

ಈ ವೇಳೆ  ಗ್ರಾಮಸ್ಥರು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಈ ನಡುವೆ ತನಿಖೆ ವೇಳೆ  ಹಣಮಂತು ಮದ್ಯಸೇವನೆ ಮಾಡಿದ್ದು ದೃಢವಾಗಿದ್ದು,  ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಲಾಗಿದೆ.Head constable jk02

 

English Summary
Title

Head Constable Suspended After Viral Video Shows On-Duty Alcohol Consumption

Short Description
A Delhi Police head constable has been suspended after a viral video exposed him consuming alcohol inside a PCR vehicle while on duty in north Delhi. The swift disciplinary action highlights the department's zero-tolerance policy against misconduct. Similar enforcement actions have recently triggered suspensions across states like Haryana and Himachal Pradesh, as authorities crack down heavily on police indiscipline.
Keywords
Head constable, suspended, consuming, alcohol, duty