Saturday, October 10, 2026

BDA Apartments

ಕ್ಯಾಪ್ಟನ್ ಕೊಹ್ಲಿ-ಕೋಚ್ ಶಾಸ್ತ್ರಿಗೆ ತರಾಟೆ ತೆಗೆದುಕೊಂಡ ಬಿಸಿಸಿಐ BDA JK_Adv BDA Adv
Home Front Page ದೆಹಲಿಯಲ್ಲಿ CJP ಪ್ರತಿಭಟನೆ: ಅಭಿಜಿತ್ ದೀಪ್ಕೆ ಸೇರಿ ಹಲವರು ಪೊಲೀಸರ ವಶಕ್ಕೆ

ದೆಹಲಿಯಲ್ಲಿ CJP ಪ್ರತಿಭಟನೆ: ಅಭಿಜಿತ್ ದೀಪ್ಕೆ ಸೇರಿ ಹಲವರು ಪೊಲೀಸರ ವಶಕ್ಕೆ

ನವದೆಹಲಿ,ಅಕ್ಟೋಬರ್,10,2026 (www.justkannada.in): ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ (CJP) ಬೃಹತ್ ಪ್ರತಿಭಟನೆಗೆ ಮುಂದಾಗಿದ್ದು ಈ ಮಧ್ಯೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿಯ ಇಂದಿರಗಾಂಧಿ ವಿಮಾನ ನಿಲ್ದಾಣದ ಬಳಿ ಅಭಿಜಿತ್ ದೀಪ್ಕೆ ಅವರನ್ನ ಪೊಲೀಸರು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಅಭಿಜಿತ್ ದೀಪ್ಕೆ ಯಾಕೆ ನನ್ನನ್ನು ವಶಕ್ಕೆ ಪಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದರು. ನನಗೆ ಯಾವುದೇ ಭಯವಿಲ್ಲ. ಹಕ್ಕು ಪ್ರತಿಭಟನೆ ನಮ್ಮ ಹಕ್ಕು.  ಸಾಂವಿಧಾನಿಕ ಹಕ್ಕು ಕಸಿಯುತ್ತಿರುವುದು ಯಾಕೆ ಎಂದು ವಾಗ್ವಾದ ನಡೆಸಿದರು. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದು ಕರೆದೊಯ್ದರು.CJP abhijith deepke

ಅಭಿಜಿತ್ ದೀಪ್ಕೆ ಅವರ ಜೊತೆ ಸೌರವ್ ದಾಸ್ ಅಶುತೋಷ್ ರಂಕಾ ಅವರನ್ನ ಸಹ ವಶಕ್ಕೆ ಪೊಲೀಸರು ವಶಕ್ಕೆ ಪಡೆದರು.  ಇನ್ನು ಪ್ರತಿಭಟನೆ ಆರಂಭಕ್ಕೂ ಮುನ್ನವೇ ದೆಹಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿ , ಸುಮಾರು 30-40 ಜನರನ್ನು ವಶಕ್ಕೆ ಪಡೆದಿದ್ದಾರೆ.CJP jk02

 

English Summary
Title

Abhijeet Dipke Detained: Delhi Police Crackdown on CJP Protest

Short Description
The Delhi Police detained Cockroach Janta Party (CJP) founder Abhijeet Dipke alongside leaders Saurav Das and Ashutosh Ranka inside an aircraft at IGI Airport. Coming from Mumbai, they planned to join a youth-led protest at Jantar Mantar demanding the resignation of Chief Election Commissioner Gyanesh Kumar over alleged voter roll manipulation. Ahead of the unpermitted rally, authorities launched a massive crackdown, detaining YouTuber Dhruv Rathee and over 400 protesters. Security measures include massive barricading and the closure of 45 Delhi metro stations to curb public mobilization.
Keywords
CJP, protest, Delhi: Abhijit Deepke, detained, police.