Sunday, November 15, 2026

Dasara Wishes

Karnataka Warns Ministers Honey Trap DasraWishes_JK DasraWishes JK
Happy Dasara
Home Front Page ಸ್ಟಿಂಗ್ ಅಪರೇಷನ್: ಸಿಎಂ ಎಚ್ಚರಿಕೆ ನೀಡಿದ್ದಾರೆ -ಸಚಿವ ಸತೀಶ್ ಜಾರಕಿಹೊಳಿ

ಸ್ಟಿಂಗ್ ಅಪರೇಷನ್: ಸಿಎಂ ಎಚ್ಚರಿಕೆ ನೀಡಿದ್ದಾರೆ -ಸಚಿವ ಸತೀಶ್ ಜಾರಕಿಹೊಳಿ

ಸ್ಟಿಂಗ್ ವಿಚಾರದ ಬಗ್ಗೆ ನನಗೆ ಎಬಿಸಿಡಿನೂ ಗೊತ್ತಿಲ್ಲ:ಇದರಿಂದ ದೂರವಿರಲು ಬಯಸುವೆ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಅಕ್ಟೋಬರ್,10,2026 (www.justkannada.in): ನಿಮ್ಮ ಮೇಲೆ ಸ್ಟಿಂಗ್ ಅಪರೇಷನ್ ಆಗಬಹುದು ಹುಷಾರಾಗಿರಿ ಎಂದು ಸಿಎಂ ಎಚ್ಚರಿಸಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯದಲ್ಲಿ ತುಂಬಾ ಸದ್ದು ಮಾಡುತ್ತಿದೆ.   ಸ್ಟಿಂಗ್ ಆಗಬಹುದು ಹುಷಾರಾಗಿರಿ ಎಂದು ಸಿಎಂ ಹೇಳಿದ್ದಾರೆ. ಬೇರೆ ಬೇರೆ ವೇಷದಲ್ಲಿ ಬರುತ್ತಾರೆ.  ಅಟ್ರ್ಯಾಕ್ಟ್ ಮಾಡುತ್ತಾರೆ. ಟ್ರ್ಯಾಫ್ ಮಾಡುತ್ತಾರೆ ಹುಷಾರಾಗಿರಿ ಎಂದಿದ್ದಾರೆ ಎಂದರು.

ಸಿದ್ದರಾಮಯ್ಯರನ್ನ ಕೆಳಗಿಳಿಸಲು ಸ್ಟಿಂಗ್ ಕಾರಣ ಎಂಬ ಹೆಚ್ ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ  ಸಚಿವ ಸತೀಶ್ ಜಾರಕಿಹೊಳಿ ಅದರ ಬಗ್ಗೆ ನಮಗೆ ಗೊತ್ತಿಲ್ಲ.  ಸ್ಟಿಂಗ್ ಆಗಬಹುದು ಹುಷಾರಾಗಿರಿ ಎಂದು ಹೇಳಿದ್ದಾರೆ ಅಷ್ಟೆ ಎಂದರು.ಸ್ಟಿಂಗ್ ವಿಚಾರದ ಬಗ್ಗೆ ನನಗೆ ಎಬಿಸಿಡಿನೂ ಗೊತ್ತಿಲ್ಲ:ಇದರಿಂದ ದೂರವಿರಲು ಬಯಸುವೆ- ಸಚಿವ ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯರನ್ನ ರಹಸ್ಯವಾಗಿ ಭೇಟಿಯಾಗುವ ಅವಶ್ಯಕತೆ ಇಲ್ಲ.  ಸಿದ್ದರಾಮಯ್ಯ ನಮ್ಮ ನಾಯಕ ಯಾವಾಗಲಾದ್ರೂ ಭೇಟಿ ಆಗಬಹುದು.  ಜಮೀರ್ 3 ಬಾರಿ ಭೇಟಿಯಾಗಿದ್ದಾರೆ.  ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ನಾವು ಕಡಿಮೆ ಭೇಟಿಯಾಗಿದ್ದವು ಎಂದರು.careful jk02_new jk02 new

Key words:  .

English Summary
Title

Karnataka CM Warns Ministers of Honey-Trap and Sting Operation Plots

Short Description
Karnataka Chief Minister D.K. Shivakumar has issued a stern warning to his Cabinet colleagues regarding covert sting operations and honey-trap attempts. According to PWD Minister Satish Jarkiholi, a private agency with operatives from North India has targeted the CM and other ministers. The state home department uncovered intelligence showing structured plans to secretly record officials in private meetings, hotels, or during interactions with strangers. Congress leaders claim these entrapment tactics are a desperate attempt by political opponents to destabilise the ruling Karnataka government. Ministers have been urged to stay highly vigilant.
Keywords
CM, warned, careful, sting operation, Minister, Satish Jarkiholi