Tuesday, September 22, 2026

BDA Apartments

ತಲೈವಾಗೆ ದೇವಸ್ಥಾನವನ್ನೇ ನಿರ್ಮಿಸಿದ ಮಧುರೈ ಅಭಿಮಾನಿ BDA JK_Adv BDA Adv
Home Cinema ತಲೈವಾಗೆ ದೇವಸ್ಥಾನವನ್ನೇ ನಿರ್ಮಿಸಿದ ಮಧುರೈ ಅಭಿಮಾನಿ

ತಲೈವಾಗೆ ದೇವಸ್ಥಾನವನ್ನೇ ನಿರ್ಮಿಸಿದ ಮಧುರೈ ಅಭಿಮಾನಿ

Pic Courtesy: ANI

ಬೆಂಗಳೂರು, ನವೆಂಬರ್ 03, 2023 (www.justkannada.in): ತಮಿಳುನಾಡಿನ ಮಧುರೈನಲ್ಲಿರುವ ತಮ್ಮ ಮನೆಯ ಆವರಣದಲ್ಲಿ ಅಭಿಮಾನಿಯೊಬ್ಬರು ತಲೈವಾಗೆ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ.

ಹೌದು. ಕಾರ್ತಿಕ್‌ ಎಂಬ ಅಭಿಮಾನಿ ನಿರ್ಮಿಸಿರುವ ದೇವಸ್ಥಾನಲ್ಲಿ 250 ಕೆ.ಜಿ ತೂಕದ ರಜನಿಕಾಂತ್‌ ವಿಗ್ರಹ ಪ್ರತಿಷ್ಠಾಪಿಸಿದ್ದಾರೆ.

ನಾನು ರಜನಿಕಾಂತ್‌ ಬಿಟ್ಟು ಬೇರೆ ಯಾವುದೇ ನಟರ ಸಿನಿಮಾ ನೋಡುವುದಿಲ್ಲ. ನಮಗೆ ಅವರೇ ದೇವರು. ಗೌರವದ ಸಂಕೇತಕ್ಕಾಗಿ ದೇವಾಲಯ ಕಟ್ಟಿಸಿದ್ದೇನೆ ಎಂದು ಕಾರ್ತಿಕ್‌ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಟಿ.ಜಿ ಜ್ಞಾನವೇಲ್ ನಿರ್ದೇಶನದ, ಲೈಕಾ ಪ್ರೋಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ‘ತಲೈವರ್ 170’ ಚಿತ್ರದಲ್ಲಿ ರಜನಿ ಅಮಿತಾಭ್ ಬಚ್ಚನ್ ಅವರೊಂದಿಗೆ ನಟಿಸುತ್ತಿದ್ದಾರೆ.