Thursday, September 10, 2026

BDA Apartments

Home Front Page ಬಿಜೆಪಿ ಈಗ ಬ್ರಿಟಿಷ್ ಜನತಾ ಪಾರ್ಟಿ:  ದೇಶವನ್ನ ಒಡೆದು ಆಳುತ್ತಿದ್ದಾರೆ- ಮಾಜಿ ಸಚಿವ ಮಧು ಬಂಗಾರಪ್ಪ

ಬಿಜೆಪಿ ಈಗ ಬ್ರಿಟಿಷ್ ಜನತಾ ಪಾರ್ಟಿ:  ದೇಶವನ್ನ ಒಡೆದು ಆಳುತ್ತಿದ್ದಾರೆ- ಮಾಜಿ ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಜುಲೈ,22,2026 (www.justkannada.in):  ನೀಟ್ ಅಕ್ರಮ ವಿರೋಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಧು ಬಂಗಾರಪ್ಪ, ಕೇಂದ್ರದ ವಿರುದ್ದ ಯುವಕರು ಹೋರಾಟ ತೀವ್ರಗೊಳಿಸಿದ್ದಾರೆ.  ಆದರೆ ಬಿಜೆಪಿಯವರ ಭಾವನೆ ಮಾತ್ರ ಬ್ರಿಟಿಷರ ರೀತಿ ಇದೆ. ಭಾರತೀಯ ಜನತಾಪಾರ್ಟಿ ಈಗ ಬ್ರಿಟಿಷ್ ಜನತಾ ಪಾರ್ಟಿ ಆಗಿದೆ. ಬಿಜೆಪಿಯವರು ಈಗ ಒಡೆದು ಆಳುವ ನೀತಿ ಮಾಡುತ್ತಿದ್ದಾರೆ.

ಬಿಜೆಪಿಯವರು ಸ್ವಾರ್ಥಕ್ಕೆ ದೇಶವನ್ನು ಒಡೆದು ಆಳುತ್ತಿದ್ದಾರೆ.  ಈ ಒಡೆದು ಆಳುವ ನೀತಿ ನಿಲ್ಲಬೇಕಿದೆ ಎಂದು ಮಧು ಬಂಗಾರಪ್ಪ ಹರಿಹಾಯ್ದಿದ್ದಾರೆ.

Key words: BJP, British Janata Party, Former Minister, Madhu Bangarappa