Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page MYSORE DISTRICT COURT: ಎಂ.ಟೆಕ್ ಪದವೀಧರ ಈಗ ಯುವ ವಕೀಲ..!

MYSORE DISTRICT COURT: ಎಂ.ಟೆಕ್ ಪದವೀಧರ ಈಗ ಯುವ ವಕೀಲ..!

MYSORE DISTRICT COURT: M. TECH GRADUATE IS NOW A YOUNG LAWYER...!

MYSORE DISTRICT COURT: M. TECH GRADUATE IS NOW A YOUNG LAWYER…!

ಮೈಸೂರು, ಆ.20,2024: (www.justkannada.in news)  ಹಿರಿಯ ಪತ್ರಕರ್ತರು, ಪ್ರತಿಷ್ಠಿತ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ 30 ವರ್ಷ ಕಾರ್ಯ ನಿರ್ವಹಿಸಿದ್ದ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾಗಿದ್ದ ಎಂ ಬಿ ಮರಮ್‌ಕಲ್ ಅವರ ಪುತ್ರ ಚೆನ್ನಬಸವರೆಡ್ಡಿ ಮರಮ್‌ಕಲ್ ಈಗ ಕಾನೂನು ಪದವೀಧರ.

ಜೆ ಎಸ್ ಎಸ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದಿದ್ದು, ಇದಕ್ಕೂ ಮುನ್ನ ಎಂ ಟೆಕ್ ಪದವೀಧರ. ಚೆನ್ನಬಸವರೆಡ್ಡಿ ಅವರಿಗೆ ಜೆ ಎಸ್ ಎಸ್ ಕಾನೂನು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕಾನೂನು ಪದವಿ ಪ್ರದಾನ ಮಾಡಲಾಯಿತು.

ಈ ವೇಳೆ ಕರ್ನಾಟಕ ಕಾನೂನು ವಿವಿ ಕುಲಪತಿ ಪ್ರೊ. ಬಸವರಾಜು , ಜೆಎಸ್‌ಎಸ್ ವಿದ್ಯಾಸಂಸ್ಥೆಯ ಸಿಇಓ ಬೆಟ್ಸೂರ್ ಮಠ್ , ಜೆ ಎಸ್ ಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲಸುರೇಶ್ ಉಪಸ್ಥಿತರಿದ್ದರು.

ಕಾನೂನು ಪದವಿ ಪಡೆದ ಚೆನ್ನಬಸವರೆಡ್ಡಿ ಅವರಿಗೆ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಬಳಗದಿಂದ ಅಭಿನಂದನೆ ಸಲ್ಲಿಸಲಾಯಿತು.

Key words: MYSORE DISTRICT COURT, M. TECH, GRADUATE, IS NOW, A YOUNG, LAWYER…!