Monday, September 14, 2026

BDA Apartments

Home Front Page ಸತ್ಯಕ್ಕೆ ಯಾವತ್ತಿಗೂ ಜಯ: ಹೆದರಿಕೆ ಅನ್ನೋದು ಸಿದ್ಧರಾಮಯ್ಯರ ರಕ್ತದಲ್ಲೇ ಇಲ್ಲ- ಡಿಕೆ ಶಿವಕುಮಾರ್

ಸತ್ಯಕ್ಕೆ ಯಾವತ್ತಿಗೂ ಜಯ: ಹೆದರಿಕೆ ಅನ್ನೋದು ಸಿದ್ಧರಾಮಯ್ಯರ ರಕ್ತದಲ್ಲೇ ಇಲ್ಲ- ಡಿಕೆ ಶಿವಕುಮಾರ್

ಕಲಬುರಗಿ,ಆಗಸ್ಟ್,20,2024 (www.justkannada.in): ಸತ್ಯಕ್ಕೆ ಯಾವತ್ತಿದ್ದರೂ ಜಯ ಸಿಗುತ್ತದೆ. ಹೆದರಿಕೆ ಅನ್ನೋದು ಸಿಎಂ ಸಿದ್ದರಾಮಯ್ಯ ಅವರ ರಕ್ತದಲ್ಲೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಿದ್ದರಾಮಯ್ಯ 40 ವರ್ಷ ಇಂತಹ ಎಷ್ಟೋ ರಾಜಕಾರಣ ನೋಡಿದ್ದಾರೆ. ಹೆದರಿಕೆ ಅನ್ನೋದು ಅವರ ರಕ್ತದಲ್ಲೇ ಇಲ್ಲ. ನಮ್ಮ ಮುಖ್ಯಮಂತ್ರಿಗಳು ಯಾವ ತಪ್ಪು ಮಾಡಿಲ್ಲ.  ಹೀಗಾಗಿ ಸತ್ಯಕ್ಕೆ ಯಾವತ್ತಿಗೂ ಜಯ ಸಿಗುತ್ತದೆ  ಎಂದು ಹೇಳಿದರು.ಸತ್ಯಕ್ಕೆ ಯಾವತ್ತಿಗೂ ಜಯ dks-siddaramaiah dks siddaramaiah

ದಲಿತ ರಾಜ್ಯಪಾಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಟಾಂಗ್ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್, ಥಾವರ್ ಚಂದ್ ಗೆಹ್ಲೋಟ್ ಅವರನ್ನ ರಾಜ್ಯಪಾಲರ ಹುದ್ದೆಯಲ್ಲಿ ಕೂರಿಸಿದ್ದು ಸಂವಿಧಾನ, ಜಾತಿಯಲ್ಲ. ಬಿಜೆಪಿಗರದ್ದು ಅನಗತ್ಯ ವಿವಾದ. ಸಿಎಂ ಸಿದ್ದರಾಮಯ್ಯರಿಗೆ ಖರ್ಗೆಯವರಿಂದ ಹಿಡಿದು, ಸಚಿವರು, ಶಾಸಕರು ಎಲ್ಲರ ಬೆಂಬಲ ಇದೆ. ರಾಜ್ಯದಲ್ಲಿ ಹತ್ತು ವರ್ಷ ನಮ್ಮದೆ ಸರ್ಕಾರ ಇರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,  ಹೈಕಮಾಂಡ್ ಗೆ ಎಲ್ಲಾ ಮಾಹಿತಿ ನೀಡಬೇಕು. ಅದಕ್ಕಾಗಿ ದಿಢೀರನೆ ದೆಹಲಿಗೆ ಹೋಗಿ ಬಂದಿದ್ದಾರೆ ಎಂದು ತಿಳಿಸಿದರು.

Key words: Fear, not, Siddaramaiah, blood, DK Shivakumar