Tuesday, September 22, 2026

BDA Apartments

ಸ್ನೇಹಮಯಿ ಕೃಷ್ಣ ವಿರುದ್ದ ಲೋಕಾಯುಕ್ತಕ್ಕೆ ಎಂ.ಲಕ್ಷ್ಮಣ್ ದೂರು BDA JK_Adv BDA Adv
Home Front Page ಸ್ನೇಹಮಯಿ ಕೃಷ್ಣ ವಿರುದ್ದ  ಲೋಕಾಯುಕ್ತಕ್ಕೆ ಎಂ.ಲಕ್ಷ್ಮಣ್ ದೂರು

ಸ್ನೇಹಮಯಿ ಕೃಷ್ಣ ವಿರುದ್ದ  ಲೋಕಾಯುಕ್ತಕ್ಕೆ ಎಂ.ಲಕ್ಷ್ಮಣ್ ದೂರು

ಮೈಸೂರು,ಅಕ್ಟೋಬರ್, 16,2024 (www.justannada.in): ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ.

ಮುಡಾ ಹಗರಣ ಸಂಬಂಧ ಇತ್ತೀಚೆಗೆ ಮಾತನಾಡಿದ್ದ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪದೇ ಪದೇ ಲೋಕಾಯುಕ್ತ ಕಚೇರಿಗೆ ಭೇಟಿ ನೀಡುತ್ತಿದ್ದು ತನಿಖಾಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ನಡುವೆ ಇದೀಗ ಸ್ನೇಹಮಯಿ ಕೃಷ್ಣ ವಿರುದ್ದ ಎಂ ಲಕ್ಷ್ಮಣ್   ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ. ಎಂ.ಲಕ್ಷ್ಮಣ್ ಗೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದ್ದಾರೆ.

ಬಳಿಕ ಮಾತನಾಡಿದ ಎಂ.ಲಕ್ಷ್ಮಣ್, ನಾನು ಲೋಕಾಯುಕ್ತ ಅಧಿಕಾರಿಯ ಮುಖವನ್ನೇ ನೋಡಿಲ್ಲ. ಲೋಕಾಯುಕ್ತ ಅಧಿಕಾರಿಗೂ ನಮಗೂ ಸಂಬಂಧವಿಲ್ಲ. ಹೀಗಿದ್ದರೂ ಲಕ್ಷ್ಮಣ್ ಲೋಕಾಯುಕ್ತ ಅಧಿಕಾರಿ ಮೇಲೆ ಒತ್ತಡ ಹಾಕ್ತಿದ್ದಾರೆ ಎಂದು ದೂರು ನೀಡಲಾಗಿದೆ. ಸ್ನೇಹಮಯಿ ಕೃಷ್ಣ ವಿರುದ್ಧ ನಾವು ಕೂಡ ದೂರು ಕೊಟ್ಟಿದ್ದೇವೆ. ಸ್ನೇಹಮಯಿ ಕೃಷ್ಣ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅನೇಕ ಪ್ರಕರಣಗಳಿವೆ. ಮುಡಾ ಅಕ್ರಮ ಬಗ್ಗೆ ತನಿಖೆ ನಡೆಯುತ್ತಿದೆ. ಈಗ ನಾವು ಸಾಕ್ಷಿ ನಾಶ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಸ್ನೇಹಮಯಿ ಕೃಷ್ಣ ದಿನ ಬೆಳಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಮುಡಾ ಸಂಪೂರ್ಣ ಸ್ವಚ್ಛ ಆಗಬೇಕು. ನಮಗಿರುವ ಮಾಹಿತಿ ಪ್ರಕಾರ ಸಿಎಂ ಒಳ್ಳೆ ಅಧಿಕಾರಿಯನ್ನ ನೇಮಕ ಮಾಡುತ್ತಾರೆ. ಮುಡಾ ಶುದ್ದಿಕರಣ ಮಾಡುವ ಕೆಲಸ ಆಗುತ್ತದೆ ಎಂದರು.

Key words: M. Laxman, complaint, Lokayukta, against, Snehamai Krishna