Friday, September 11, 2026

BDA Apartments

Home Front Page ಸಚಿವ ಸುರೇಶ್ ಕುಮಾರ್ ಇರೊವರೆಗೂ ಶಾಲೆಗಳು ಉದ್ದಾರ ಆಗಲ್ಲ ಎಂದ ಎಲ್.ಆರ್.ಶಿವರಾಮೇಗೌಡ

ಸಚಿವ ಸುರೇಶ್ ಕುಮಾರ್ ಇರೊವರೆಗೂ ಶಾಲೆಗಳು ಉದ್ದಾರ ಆಗಲ್ಲ ಎಂದ ಎಲ್.ಆರ್.ಶಿವರಾಮೇಗೌಡ

ಬೆಂಗಳೂರು, ಜೂನ್ 26, 2021 (www.justkannada.in): ಸಚಿವ ಸುರೇಶ್ ಕುಮಾರ್ ಇರೊವರೆಗೂ ಶಾಲೆಗಳು ಉದ್ದಾರ ಆಗಲ್ಲ ಎಂದು ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಲ್.ಆರ್.ಶಿವರಾಮೇಗೌಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಾಗಮಂಗಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುರೇಶ್ ಕುಮಾರ್ ಅವರ ಯಡಬಿಡಂಗಿ ನಿರ್ಧಾರಗಳೇ ಇಂದಿನ ಶಿಕ್ಷಣ ಅವ್ಯವಸ್ಥೆಗೆ ಕಾರಣ ಎಂಬುದಾಗಿ ದೂರಿದ್ದಾರೆ.

ಸುರೇಶ್ ಕುಮಾರ್ ನನ್ನ ಸ್ನೇಹಿತ, ಆದರೆ ಅವರಿಗೆ ಈ ಖಾತೆ ಸರಿಹೊಂದಲ್ಲ. ಸರ್ಕಾರ ಖಾಸಗಿ ಶಾಲೆಗಳಿಗೆ ಯಾವುದೇ ಸವಲತ್ತು ನೀಡದೆ ಗದಾಪ್ರಹಾರ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

ಮೂರನೇ ಅಲೆಯಲ್ಲಿಯೂ ನಿಮ್ಮ ಜೀವ ನಿಮ್ಮ ಕೈಯಲ್ಲಿ ಎಂಬಂತೆ ಜನರು ಜಾಗೃತರಾಗಬೇಕಿದೆ. ಸರ್ಕಾರವನ್ನು ನಂಬುವಂತಿಲ್ಲ‌ ಎಂದು ಕಿಡಿಕಾರಿದ್ದಾರೆ. 2023 –HD Kumaraswamy –mysore-former MP- LR Shivaramegowda.