Wednesday, September 9, 2026

BDA Apartments

Home Front Page ಚಾಮುಂಡಿ ಬೆಟ್ಟದ ಗೋಶಾಲೆಗೆ ನೆರವು ನೀಡಿದ ಶಾಸಕ ಎಸ್‌.ಟಿ.ಸೋಮಶೇಖರ್‌

ಚಾಮುಂಡಿ ಬೆಟ್ಟದ ಗೋಶಾಲೆಗೆ ನೆರವು ನೀಡಿದ ಶಾಸಕ ಎಸ್‌.ಟಿ.ಸೋಮಶೇಖರ್‌

ಮೈಸೂರು,ಜುಲೈ,25,2026 (www.justkannada.in):  ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಹಾಗೂ ಅದರ ಸಮುಚ್ಛಾಯದ ದೇವಾಲಯಗಳ ಕ್ಷೀರಾಭಿಷೇಕಕ್ಕೆ ಬಳಸುವ ಗೋಶಾಲೆಯ ಅಭಿವೃದ್ಧಿಗೆ ಶಾಸಕ ಎಸ್‌.ಟಿ.ಸೋಮಶೇಖರ್‌ 4ಲಕ್ಷ ಮೌಲ್ಯದ ನೆರವು ನೀಡಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿನ ಗೋಶಾಲೆ ಯಾವುದೇ ಅಭಿವೃದ್ಧಿ ಕಂಡಿರಲಿಲ್ಲ. 2007-08ರಲ್ಲಿ ದಾಸೋಹ ಭವನದ ಹಿಂದಿರುವ ಜಾಗದಲ್ಲಿ ಗೋಶಾಲೆ ನಿರ್ಮಿಸಲು ಮುಂದಾಗಿದ್ದು, ಪ್ರಾರಂಭದಲ್ಲಿ ಅಂದಿನ ವಿಧಾನಸಭಾಧ್ಯಕ್ಷರಾಗಿದ್ದ ಕೃಷ್ಣಪ್ಪ ಎರಡು ಗೋವುಗಳನ್ನು ಕೊಡುಗೆಯಾಗಿ ನೀಡಿದ್ದರು. ಎರಡು ಹಸುಗಳಿದ್ದ ಗೋ ಶಾಲೆಯಲ್ಲೀಗ 30ರಷ್ಟು ಗೋವುಗಳಿವೆ. ಈ ಹಿನ್ನೆಲೆಯಲ್ಲಿ ಅವುಗಳಿಗೆ ಅಗತ್ಯವಾದ ನೆರವು ನೀಡುವಂತೆ ಸಮಾಜ ಸೇವಕ ಶಿವಕುಮಾರ್‌ ಶಾಸಕ ಎಸ್.ಟಿ.ಸೋಮಶೇಖರ್‌ ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮನವಿಗೆ ಸ್ಪಂದಿಸಿದ ಎಸ್‌.ಟಿ. ಸೋಮಶೇಖರ್‌ ಲಕ್ಷಾಂತರ ಮೌಲ್ಯದಲ್ಲಿ ಮೆಸ್‌ ಅಳವಡಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಿತ್ಯ ಸೊಳ್ಳೆ, ಗಾಳಿಯಿಂದ ಪರಿತಪಿಸುತ್ತಿದ್ದ ಗೋಶಾಲೆಯ ಗೋವುಗಳು ನೆಮ್ಮದಿಯಿಂದ ಇರಲು ಅನೂಕೂಲ ಮಾಡಿಕೊಟ್ಟ ಶಾಸಕರ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಬೆಟ್ಟದ ಮಂಗಲ ಕುಮಾರ್‌, ಮಾಜಿ ಸಚಿವ ಸೋಮಶೇಖರ್‌ ಅವರು ಕ್ಷೇತ್ರ ಯಾವುದು ಎಂದು ಯೋಚಿಸದೇ ಗೋಶಾಲೆಗೆ ನೆರವು ನೀಡಿದ್ದಾರೆ. ಅವರ ನಡೆಗೆ ಚಾಮುಂಡೇಶ್ವರಿ ಮತ್ತಷ್ಟು ಅಧಿಕಾರ, ಆಯುಸ್ಸು ಕರುಣಿಸಲಿ. ಬೆಟ್ಟದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಅವರ ಸಹಕಾರದಿಂದ ಗೋಶಾಲೆ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಹೀಗೆ ದಾನಿಗಳು ಮತ್ತಷ್ಟು ನೆರವು ಗೋಶಾಲೆಗೆ ಮುಖ್ಯವಾಗಿದೆ ಎಂದರು.

ಈ ಕುರಿತು ಇತ್ತೀಚೆಗಷ್ಟೇ ಗೋಶಾಲೆಗೆ ಭೇಟಿ ನೀಡಿದ್ದ ಮಾಜಿ ಸಚಿವ ಎಸ್.‌ಟಿ.ಸೋಮಶೇಖರ್‌ ಕೆಂಗೇರಿಯ ಸಮಾಜ ಸೇವಕ ಶಿವಕುಮಾರ್‌ ಕೋರಿಕೆ ಮೇರೆಗೆ ನೇರವು ನೀಡಿದ್ದೇನೆ. ಚಾಮುಂಡಿ ಬೆಟ್ಟ ಧಾರ್ಮಿಕ ಕ್ಷೇತ್ರ ಅದರ ಗೋಶಾಲೆಗೆ ನೆರವು ಕೇಳಿದಾಗ ಅಗತ್ಯವಾಗಿ ನೀಡುವುದಾಗಿ ಸಹಕಾರ ನೀಡಿದ್ದೇನೆಂದರು.

Key words: MLA, S.T. Somashekar, donated, Chamundi Hills, cow, shelter