ಪರೀಕ್ಷೆ ಬರೆದವರನ್ನೇ ರಿಸಲ್ಟ್ ಬಗ್ಗೆ ಕೇಳಿ ! ಯೋಗೇಶ್ವರ್ ಹೇಳಿಕೆಗೆ ಸಿ.ಟಿ.ರವಿ ಟಾಂಗ್

ಬೆಂಗಳೂರು, ಜೂನ್ 26, 2021 (www.justkannada.in)ಎಕ್ಸಾಂ ಬರೆದಿದ್ದೇವೆ, ರಿಸಲ್ಟ್ ಗಾಗಿ ಕಾಯುತ್ತಿದ್ದೇವೆ ಎಂಬ ಯೋಗೇಶ್ವರ್ ಹೇಳಿಕೆಗೆ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.

ಪರೀಕ್ಷೆ ಬರೆದವರನ್ನೇ ಕೇಳಿ ಎಂದಿರುವ ರವಿ, ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಸಚಿವ ಯೋಗೇಶ್ವರ್ ಹಾಗೂ ಸಿ.ಟಿ.ರವಿ ಒಟ್ಟಿಗೆ ದೆಹಲಿಗೆ ಪ್ರಯಾಣಿಸಿದ್ದಾರೆ ಎಂಬ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ.

ಯೋಗೇಶ್ವರ್ ದೆಹಲಿಗೆ ಬಂದಿರುವ ಬಗ್ಗೆ ನನಗೂ ಏರ್ ಪೋರ್ಟ್ ನಲ್ಲಿ ಮಾಹಿತಿ ಸಿಕ್ಕಿತು. ಯಾಕೆ ಬಂದಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.