Friday, September 11, 2026

BDA Apartments

O último dia de um condenado : Descubra, Guarde, Compartilhe BDA JK_Adv BDA Adv
Home Front Page ರಮೇಶ್ ಜಾರಕಿಹೊಳಿ ರಾಜೀನಾಮೆ ಕುರಿತು ಬಿ.ಸಿ.ಪಾಟೀಲ್ ಹೇಳಿದ್ದಿಷ್ಟು…

ರಮೇಶ್ ಜಾರಕಿಹೊಳಿ ರಾಜೀನಾಮೆ ಕುರಿತು ಬಿ.ಸಿ.ಪಾಟೀಲ್ ಹೇಳಿದ್ದಿಷ್ಟು…

ಬೆಂಗಳೂರು, ಜೂನ್ 26, 2021 (www.justkannada.in)ರಮೇಶ್ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಅವಶ್ಯಕತೆಯಿಲ್ಲ ಎಂದು  ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ವಿರುದ್ಧ ಪಿತೂರಿ ಮಾಡಿ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿದ್ದಾರೆ. ಶೀಘ್ರದಲ್ಲಿ ಸತ್ಯ ಹೊರಬರುತ್ತದೆ. ನಂತರ ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಹೇಳಿದ್ದಾರೆ.

ಸಚಿವ ಯೋಗೇಶ್ವರ್ ದಿಢೀರ್ ದೆಹಲಿ ಭೇಟಿಯ ಕುರಿತು ಪ್ರತಿಕ್ರಿಯಿಸಲು ಸಚಿವರು ನಿರಾಕರಿಸಿದರು. 2023 ಚುನಾವಣೆ ಬರಬೇಕು. ಅದರಲ್ಲಿ ಜನರು ಕೊಟ್ಟ ಫಲಿತಾಂಶ ಬರಬೇಕು. ಕಾಂಗ್ರೆಸ್ ನವರ ಕನಸು ನನಸಾಗದು. ಮತ್ತೆ ಬಿಜೆಪಿ ಬರುತ್ತದೆ. ನಾವೇ ಸರ್ಕಾರ ನಡೆಸುತ್ತೇವೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.