ಮೈಸೂರು,ಸೆಪ್ಟಂಬರ್,11,2026 (www.justkannada.in): ಅನಿಯಮಿತ ಲೋಡ್ ಶೆಡ್ಡಿಂಗ್ ವಿರೋಧಿಸಿ ರೈತರು ಇಂದು ಮೈಸೂರಿನ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಹಿನಕಲ್ ನಲ್ಲಿರುವ ಚೆಸ್ಕಾಂ ಕಚೇರಿಗೆ ಪ್ರತಿಭಟನಾನಿರತ ರೈತರು ಮುತ್ತಿಗೆ ಹಾಕಲು ಮುಂದಾದರು ಈ ವೇಳೆ ಪೊಲೀಸರು ರೈತರನ್ನ ತಡೆಯಲು ಯತ್ನಿಸಿದರು. ಗೇಟ್ ತಳ್ಳಿ ಕಚೇರಿ ಆವರಣ ಪ್ರವೇಶಿಸಿ ಅಲ್ಲೇ ಕುಳಿತು ರೈತರು ಧರಣಿ ನಡೆಸಿದರು.
ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಲೋಡ್ ಶೆಡ್ಡಿಂಗ್ ಕೂಡಲೇ ಬಿಡುವಂತೆ ಆಗ್ರಹಿಸಿದರು.
Key words: Farmers, protest, CESC office, Mysuru.







