Friday, September 11, 2026

BDA Apartments

Home Front Page ಗ್ರಾಮೀಣ ಭಾಗದಲ್ಲಿ ಕೋವಿಡ್ ಲಸಿಕೆ ಕೊರತೆ: ಮೈಸೂರಿನಲ್ಲಿ ಕರವೇ ಪ್ರತಿಭಟನೆ

ಗ್ರಾಮೀಣ ಭಾಗದಲ್ಲಿ ಕೋವಿಡ್ ಲಸಿಕೆ ಕೊರತೆ: ಮೈಸೂರಿನಲ್ಲಿ ಕರವೇ ಪ್ರತಿಭಟನೆ

ಬೆಂಗಳೂರು, ಜೂನ್ 26, 2021 (www.justkannada.in)ಲಸಿಕೆ ಸಿಗದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕರವೇಯಿಂದ ಪ್ರತಿಭಟನೆ ನಡೆಸಲಾಗಿದೆ.

ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿ ಆರೋಗ್ಯ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿ, ಕೆಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡೂ ಲಸಿಕೆ ಕೊರತೆ ಇಲ್ಲ ಎನ್ನುತ್ತಾರೆ. ಆದ್ರೆ ಆಸ್ಪತ್ರೆಗಳಿಗೆ ಬಂದ್ರೆ ಲಸಿಕೆ ಇಲ್ಲ ಎನ್ನುತ್ತಾರೆ. ಆಸ್ಪತ್ರೆ ಮುಂಭಾಗ ನೋ ಸ್ಟಾಕ್ ಅನ್ನೋ ಬೋರ್ಡ್ ಇರುತ್ತೆ. ಕೂಡಲೇ ಹಳ್ಳಿಗಾಡಿನ ಜನ್ರಿಗೆ ಸಮರ್ಪಕ ಲಸಿಕೆ ನೀಡುವಂತೆ ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.