ಲವ್ ಮಾಕ್‍ಟೇಲ್-2 ಸ್ಕ್ರಿಪ್ಟ್ ರೆಡಿ ಮಾಡ್ತಿದ್ದಾರೆ ಡಾರ್ಲಿಂಗ್ ಕೃಷ್ಣ

ಬೆಂಗಳೂರು, ಜೂನ್ 01, 2020 (www.justkannada.in): ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ಲವ್ ಮಾಕ್‍ಟೇಲ್-2 ಚಿತ್ರದ ಸ್ಕ್ರಿಪ್ಟ್ ತಯಾರಿ ನಡೆಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಲವ್ ಮಾಕ್‍ಟೇಲ್ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ. ಥೀಯೇಟರ್‍ನಲ್ಲಿ ಸದ್ದು ಮಾಡಿದ್ದಲ್ಲದೇ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಸಹ ಫುಲ್ ಹವಾ ಸೃಷ್ಟಿಸಿತ್ತು.

ಚಿತ್ರ ಸೋತು ಗೆದ್ದ ಸಂತಸದ ಬೆನ್ನಲ್ಲೇ ಇದೀಗ ಲವ್ ಮ್ಯಾಕ್ಟೇಲ್-2ಚಿತ್ರಮಾಡುವುದಾಗಿ ಡಾರ್ಲಿಂಗ್ ಕೃಷ್ಣ ಘೋಷಿಸಿದ್ದಾರೆ. ಈ ಮೂಲಕ ಅದೇ ಚಿತ್ರದ ಮತ್ತೊಂದು ಭಾಗ ಸಿದ್ಧವಾಗುತ್ತಿದೆ.