ಲೋಕಸಭೆ ಚುನಾವಣೆ: ನಾಳೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ ಆರಂಭ-ಮೈಸೂರು ಡಿ.ಸಿ ಡಾ.ಕೆ.ವಿ ರಾಜೇಂದ್ರ.

ಮೈಸೂರು,ಮಾರ್ಚ್,27,2024(www.justkannada.in): ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ನಗರದ ನೂತನ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ  ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ, ನೋಟಿಫಿಕೇಶನ್ ಬಂದ ದಿನದಿಂದಲೇ ನಾಮಪತ್ರ ಸಲ್ಲಿಸುವುದಕ್ಕೆ ಅವಕಾಶವಿದೆ.  ನಾಳೆ ಅಂದರೆ ಮಾರ್ಚ್ 28 ರಂದು ನೋಟಿಫಿಕೇಶನ್ ಆದೇಶ ಮಾಡುತ್ತೇವೆ. ಬೆಳಿಗ್ಗೆ 11 ಗಂಟೆಯಿಂದ 3 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಅವಕಾಶವಿದೆ. ನಾಮಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್  4. ನಾಮಪತ್ರ ಸಲ್ಲಿಸಲು ಲೆಟೆಸ್ಟ್ ಫಾರಂ 26 ಅನ್ನು ಬಳಕೆ ಮಾಡಲು ಸೂಚಿಸಿದ್ದೇವೆ. ಎಸ್ ಸಿ ಎಸ್ ಟಿಯವರಿಗೆ ಸೆಕ್ಯೂರಿಟಿ ಡೆಪಾಸಿಟ್ 12500 ರೂಪಾಯಿ,  ಉಳಿದವರಿಗೆ 25 ಸಾವಿರ  ರೂ.ಆಗಿದೆ ಎಂದರು.

ನಾಮಪತ್ರ ಸಲ್ಲಿಕೆ ಮಾಡಲು ಅಭ್ಯರ್ಥಿಯನ್ನು ಸೇರಿ 5 ಜನರಿಗೆ ಮಾತ್ರ ಅವಕಾಶವಿರುತ್ತದೆ. ನಾಮಪತ್ರ ಸಲ್ಲಿಸುವಾಗ ಕಚೇರಿಯ 100 ಮೀಟರ್ ಆಸುಪಾಸಿನ ಅಂತರದಲ್ಲಿ ಮೂರು ವಾಹನಗಳಿಗೆ ಮಾತ್ರ ಅವಕಾಶವಿರಲಿದೆ ಎಂದು ಡಿಸಿ ರಾಜೇಂದ್ರ ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಪೋಟೊ ಕಳಿಸಿದ್ರೆ ಅದರ ಆಧಾರದಲ್ಲಿ ಕ್ರಮ

ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಮಾಧ್ಯಮದವರು ಒಂದು ಫೋಟೋ ಕಳುಹಿಸಿದರೆ ಸಾಕು . ನಾವು ಲೊಕೇಶನ್ ಆಧಾರವನ್ನಿಟ್ಟುಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮಾಹಿತಿ ನೀಡಿದವರ ಮೊಬೈಲ್ ಸಂಖ್ಯೆ ದಾಖಲಾಗುವುದಿಲ್ಲ ಎಂದರು.

ಖರ್ಚುವೆಚ್ಚಗಳ ಮೇಲೆ ಬಹಳ ನಿಗಾ ಇಡುತ್ತೇವೆ. ಖರ್ಚು ವೆಚ್ಚವನ್ನು ವೀಕ್ಷಣೆ ಮಾಡುವವರು ಸಹ ಇರುತ್ತಾರೆ . ಪೋಲಿಂಗ್ ಪರ್ಸನಲ್ ಗಳಿಗೆ ಮೊದಲನೇ ತರಬೇತಿ ಮಾರ್ಚ್ 31 ಹಾಗೂ ಏಪ್ರಿಲ್ 1ನೇ ರಂದು ಇರುತ್ತದೆ.  ಹಾಗೂ ಒಂದು ದಿನ ಚುನಾವಣೆ ಮುಂಚೆ,  ಒಂದು ದಿನ ಚುನಾವಣೆ ನಂತರ ಸರ್ಕಾರಿ ನೌಕರರು ಸಹಕರಿಸಬೇಕು. ಸರ್ಕಾರಿ ನೌಕರರು ಆರೋಗ್ಯ ಸಮಸ್ಯೆಯನ್ನು ಹೇಳಿ ಗೈರಾಗಲು ದಯವಿಟ್ಟು ಕೇಳಬೇಡಿ ಎಂದು ಮನವಿ ಮಾಡಿದರು.

43 ಸಾವಿರಕ್ಕೂ ಹೆಚ್ಚು ಜನ 85 ವರ್ಷದ ಮೇಲ್ಪಟ್ಟು ಇದ್ದಾರೆ. ಅದರಲ್ಲಿ ಶೇ. 50ರಷ್ಟು ಭಾಗದ ಜನ ನಮಗೆ ಅಂಚೆ ಮತ ಬೇಡ ಎಂದಿದ್ದಾರೆ. ಎಲ್ಲ ಮನೆಗಳನ್ನು ತಲುಪಿದ್ದೇವೆ. ಮನೆ ಮತ ಯಾರಿಗೆಲ್ಲ ಬೇಕು ಎಂಬುದು ಖಚಿತಪಡಿಸಿಕೊಂಡ್ಡಿದ್ದೇವೆ ಎಂದು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ತಿಳಿಸಿದರು.

Key words: LokSabha, Elections, Mysore, KV Rajendra.