Monday, September 21, 2026

BDA Apartments

ಡಿಸೆಂಬರ್ 22ಕ್ಕೆ ವಿಶ್ವದಾದ್ಯಂತ ‘ಸಲಾರ್’ ಬಿಡುಗಡೆ BDA JK_Adv BDA Adv
Home Cinema ಡಿಸೆಂಬರ್ 22ಕ್ಕೆ ವಿಶ್ವದಾದ್ಯಂತ ‘ಸಲಾರ್’ ಬಿಡುಗಡೆ

ಡಿಸೆಂಬರ್ 22ಕ್ಕೆ ವಿಶ್ವದಾದ್ಯಂತ ‘ಸಲಾರ್’ ಬಿಡುಗಡೆ

ಬೆಂಗಳೂರು, ಸೆಪ್ಟೆಂಬರ್ 30, 2023 (www.justkannada.in): ಪ್ರಭಾಸ್ ನಟನೆಯ ‘ಸಲಾರ್’ ಚಿತ್ರವನ್ನು ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಘೋಷಣೆ ಮಾಡಿದೆ.

ಈ ಮೊದಲು ಸೆ.28ರಂದು ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಕಾರಣಾಂತರಗಳಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿತ್ತು. ಜುಲೈ 6 ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು.

ಅಂದಹಾಗೆ ಕೆಜಿಫ್ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷ್-ಕಟ್ ಹೇಳಿರುವ ‘ಸಲಾರ್’, ‘ಕೆ.ಜಿ.ಎಫ್.’ನಂತೆ ಎರಡು ಭಾಗಗಳಲ್ಲಿ ತೆರೆಕಾಣುತ್ತಿದೆ. ಸಿನಿಮಾದ ಮೊದಲ ಭಾಗಕ್ಕೆ ‘ಸೀಸ್ ಫೈರ್’ ಎಂಬ ಅಡಿಬರಹವಿದೆ.

ಸಲಾರ್ ಅಧಿಕೃತ ಟ್ರೇಲರ್ ಪ್ರಭಾಸ್ ಅವರ ಹುಟ್ಟುಹಬ್ಬದಂದು ಅಂದರೆ ಅಕ್ಟೋಬರ್ 23 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ. ಪ್ರಭಾಸ್ ಜೊತೆಗೆ ಸಲಾರ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಟಿನ್ನು ಆನಂದ್, ಶ್ರೀಯಾ ರೆಡ್ಡಿ, ಮತ್ತು ಪ್ರಮೋದ್ ನಟಿಸಿದ್ದಾರೆ.