Wednesday, August 12, 2026

BDA Apartments

Home Front Page ನನ್ನ ವಿರುದ್ದ ಷಡ್ಯಂತ್ರ ಮಾಡಿದವರಿಗೂ ಟಿಕೆಟ್ ಇಲ್ಲ: ಇನ್ನಾದ್ರೂ ಪಾಠ ಕಲಿಯಲಿ- ಶೋಭಾ ಕರಂದ್ಲಾಜೆ ಟಾಂಗ್.

ನನ್ನ ವಿರುದ್ದ ಷಡ್ಯಂತ್ರ ಮಾಡಿದವರಿಗೂ ಟಿಕೆಟ್ ಇಲ್ಲ: ಇನ್ನಾದ್ರೂ ಪಾಠ ಕಲಿಯಲಿ- ಶೋಭಾ ಕರಂದ್ಲಾಜೆ ಟಾಂಗ್.

ಬೆಂಗಳೂರು,ಮಾರ್ಚ್,14,2024(www.justkannada.in): ನನ್ನ ವಿರುದ್ದ ಗೋ ಬ್ಯಾಕ್ ಅಭಿಯಾನ ಮಾಡಿದ್ರು. ನನ್ನ ವಿರುದ್ದ ಷಡ್ಯಂತ್ರ ಮಾಡಿದವರಿಗೂ ಟಿಕೆಟ್ ಸಿಕ್ಕಿಲ್ಲ.  ಇನ್ನಾದ್ರೂ ನನ್ನನ್ನ ವಿರೋಧ ಮಾಡುವವರು ಪಾಠ ಕಲಿಯಲಿ ಎಂದು ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಟಾಂಗ್ ನೀಡಿದರು.

ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ಸಿಕ್ಕ ಬೆನ್ನಲ್ಲೆ ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿಯಾಗಿ ಧನ್ಯವಾದ ಅರ್ಪಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಚಿಕ್ಕಮಗಳೂರಿನಲ್ಲಿ ಅಭಿವೃದ್ದಿ ಕೆಲಸ ಮಾಡಿದ್ದೇನೆ. ಆದರೂ ನನ್ನ ವಿರುದ್ದ ಗೋಬ್ಯಾಕ್ ಅಭಿಯಾನ ಮಾಡಿದರು.  ಷಡ್ಯಂತ್ರ ಮಾಡಿದವರಿಗೆ ಟಿಕೆಟ್ ಮಿಸ್ ಆಗಿದೆ. ಪಕ್ಷಕ್ಕೆ ಅವಮಾನ ಮಾಡಿದವರಿಗೆ ಮಣೆ ಹಾಕಿಲ್ಲ. ಇನ್ನಾದರೂ ವಿರೋಧ ಮಾಡುವವರು ಪಾಠ ಕಲಿಯಬೇಕು ಎಂದರು.

ನನ್ನ ಪರವಾಗಿ  ನನ್ನ ನಾಯಕರು ನಿಂತಿದ್ದಾರೆ. ನನ್ನ ನಾಯಕತ್ವ ಕೆಲಸವನ್ನ ಪಕ್ಷ ಗುರುತಿಸಿದೆ. ನನ್ನ ನಾಯಕರ ನಿರ್ಧಾರಕ್ಕೆ ನಾನು ಬದ್ಧ. ಈ ಹಿಂದೆ ಯಶವಂತಪುರದಲ್ಲಿ ಮಾಡಿದ್ದೆ ಈಗ ನನ್ನನ್ನು ಬೆಂಗಳೂರಿಗೆ ಕಳಿಸಿದ್ದಾರೆ ಎಂದರು.

Key words: lokasabha-election-ticket- Shobha Karandlaje