ಈ ಲಾಕ್ ಡೌನ್ ಮಹತ್ವದ್ದು: ಪೊಲೀಸ್ ಫೋರ್ಸ್ ಬಳಸುವ ಪರಿಸ್ಥಿತಿ ತರಬೇಡಿ- ಜನರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು,ಜು,15,2020(www.justkannada.in):  ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆ,  ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲಾಗಿದ್ದು ಪೊಲೀಸರಿಗೆ ಜನರು ಸಹಕರಿಸಬೇಕು. ಅನಗತ್ಯವಾಗಿ ಓಡಾಡಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ  ಜನರಿಗೆ ಎಚ್ಚರಿಕೆ ನೀಡಿದರು.jk-logo-justkannada-logo

ನಗರದಲ್ಲಿ ಇಂದು ಮಾಧ್ಯಮದ ಜೊತೆ ಮಾತನಾಡಿದ  ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಲಾಕ್​ಡೌನ್​ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲ ಕಡೆ ಬ್ಯಾರಿಕೇಟ್​ ಹಾಕಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಳೆದ ಬಾರಿಗಿಂತ ಈ ಬಾರಿಯ ಲಾಕ್​ಡೌನ್ ಮಹತ್ವದ್ದು, ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಲಾಕ್​ಡೌನ್ ಮಾಡಲಾಗಿದೆ  ಎಂದು ತಿಳಿಸಿದರು.lock-down-home-minister-basavaraja-bommai-warns-people

ಇನ್ನು 12 ಗಂಟೆ ವರೆಗೆ ಮಾತ್ರ ಜನರಿಗೆ ಅವಶ್ಯ ವಸ್ತು ಖರೀದಿಸಲು ಅವಕಾಶ ನೀಡಲಾಗಿದೆ. 12 ಗಂಟೆ ನಂತರ ಲಾಕ್ ಡೌನ್ ನಿಯಮ ಉಲ್ಲಂಘಿಸಿದರೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಲಾಕ್​ಡೌನ್ ಯಶಸ್ವಿ ಆಗಬೇಕಾದರೆ ಜನರ ಸಹಕಾರ ಕೂಡಬೇಕು. ಜನರು ಸ್ವಯಂ ಪ್ರೇರಣೆ ಯಿಂದ ಲಾಕ್​ಡೌನ್ ಮಾಡಬೇಕಿದೆ. ಅನಿವಾರ್ಯವಾದರೇ ಪೊಲೀಸ್​ ಫೋರ್ಸ್ ಬಳಕೆ ಮಾಡಲಾಗುತ್ತದೆ. ಹೀಗಾಗಿ ಪೊಲೀಸ್ ಫೋರ್ಸ್ ಬಳಕೆ ಮಾಡದ ರೀತಿ ಜನರು ಸಹಕಾರ ನೀಡಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

Key words: lock down-Home Minister -Basavaraja Bommai -warns -people