ಮಹಾಮಾರಿ ಕೊರೋನಾಗೆ ಎಎಸ್ ಐ ಬಲಿ…

ಹುಬ್ಬಳ್ಳಿ,ಜು,15,2020(www.justkannada.in): ರಾಜ್ಯದಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದ್ದು ಈ ನಡುವೆ ಇಂದು ಕೊರೋನಾ ಸೋಂಕಿನಿಂದ ಎಎಸ್ ಐ ಒಬ್ಬರು ಸಾವನ್ನಪ್ಪಿದ್ದಾರೆ.jk-logo-justkannada-logo

ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ 58 ವರ್ಷದ ಎಎಸ್ ಐ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 58 ವರ್ಷದ ಎಎಸ್ ಐಗೆ ಕೊರೊನಾ ವೈರಸ್ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನ ಒಂದು ವಾರದ ಹಿಂದೆಯೇ  ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಎಎಸ್ ಐ ಸಾವನ್ನಪ್ಪಿದ್ದಾರೆ. ಎಎಸ್ ಐ ನಿಧನದ ಬಗ್ಗೆ ಜಿಲ್ಲಾಡಳಿತದಿಂದ ಅಧಿಕೃತ ಘೋಷಣೆ ಬಾಕಿಯಿದ್ದು, ಇಂದು ಸಂಜೆ ಹೆಲ್ತ್ ಬುಲಿಟಿನ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.asi-death-corona-virus

ಇನ್ನು ಧಾರವಾಡದ ಎಸ್ ಪಿ ಕಚೇರಿಗೆ ಕೊರೋನಾ ಭೀತಿ ಎದುರಾಗಿದೆ. ಇಲ್ಲಿ ಕಾನ್ಸ್ ಟೇಬಲ್ ಮತ್ತು ಎಎಸ್ ಐಗೆ ಕೊರೋನಾ ಸೋಂಕು ತಗುಲಿದ್ದು ಇದೀಗ ಕಚೇರಿಸಿಬ್ಬಂದಿಗೆ ಭೀತಿ ಶುರುವಾಗಿದೆ. ಪಾಲಿಕೆ ಸಿಬ್ಬಂದಿ ಕಚೇರಿಯನ್ನ ಸ್ಯಾನಿಟೈಸ್ ಮಾಡಿದ್ದಾರೆ.

Key words: ASI death- Corona-virus