ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ ಸಚಿವ ಜಗದೀಶ್ ಶೆಟ್ಟರ್

ನವದೆಹಲಿ,ಜುಲೈ,20,2021(www.justkannada.in): ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಇಂದು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ  ಚರ್ಚಿಸಿದರು.jk

ಇದೇ ವೇಳೆ ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್ ಗಳನ್ನು ಘೋಷಿಸುವಂತೆ ಹಾಗೂ ಮೈಸೂರಿನ ಬೆಮೆಲ್ ಕಾರ್ಖಾನೆ ಉಪಯೋಗಿಸದೆ ಇರುವ 300 ಎಕರೆ ಪ್ರದೇಶವನ್ನು ಕೆಐಡಿಬಿಗೆ ನೀಡುವಂತೆ  ಸಚಿವ ಜಗದೀಶ್ ಶೆಟ್ಟರ್ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ರಾಜ್ ಕುಮಾರ್ ಖತ್ರಿ, ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಉಪಸ್ಥಿತರಿದ್ದರು. ಈ ಮನವಿಗೆ ಸಕಾರಾತ್ಮಕ ವಾಗಿ ರಕ್ಷಣಾ ಸಚಿವರು ಸ್ಪಂದಿಸಿದ್ದಾರೆ.

Key words: Minister -Jagdish Shetter- met – Union Defense Minister -Rajnath Singh.