ಟಿಎಚ್ ಓ ನಾಗೇಂದ್ರ ಆತ್ಮಹತ್ಯೆ ಪ್ರಕರಣ: ಸಚಿವ ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದ ಆರ್.ಧೃವನಾರಾಯಣ್

ಮೈಸೂರು, ಆಗಸ್ಟ್, 21, 2020(www.justkannada.in) :ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಸಾವಿನ ನೈತಿಕ ಹೊಣೆ ಹೊತ್ತು ಸಚಿವ ಸುಧಾಕರ್ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಆಗ್ರಹಿಸಿದರು.

ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಆಕ್ರೋಶವ್ಯಕ್ತಪಡಿಸಿದರು.

government,dead,Former,MP R.Dhruvanarayan?, mysore

ನಗರದ ಜಲದರ್ಶಿನಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಆರ್. ಧೃವನಾರಾಯಣ್, ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಈ ಸರಕಾರ ಬದುಕಿದೆಯೋ, ಸತ್ತಿದಿಯೋ..? ಎಂದು ಪ್ರಶ್ನಿಸಿದರು.

ಆರೋಗ್ಯ ಸಿಬ್ಬಂದಿಗಳ ಕೊರೋನಾ ವಿರುದ್ಧ ಅವರ ಹೋರಾಟಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನಾಗೇಂದ್ರ ಅವರು ಜ್ಯುಬಿಲಿಯಂಟ್ ಕಾರ್ಖಾನೆಯ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಅಂತಹ ಅಧಿಕಾರಿಯ ಸಾವಿಗೆ ಜಿಲ್ಲಾಡಳಿತ ಹಾಗೂ ಸರ್ಕಾರವೇ ನೇರ ಹೊಣೆ ಎಂದು ಧೃವನಾರಾಯಣ್ ಆರೋಪಿಸಿದರು.

ಹಾಗೆಯೇ ಟಿಹೆಚ್ ಓ ಸಾವಿನ ನೈತಿಕ ಹೊಣೆ ಹೊತ್ತು ಸಚಿವ ಸುಧಾಕರ್ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಧೃವನಾರಾಯಣ್,  ಲಾಕ್ ಡೌನ್ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಮೆಡಿಕಲ್ ಇನ್ಫ್ರಾಸ್ಟ್ರಕ್ಚರ್ ಹೆಚ್ಚಿಸಬೇಕಾಗಿತ್ತು. ಅದನ್ನು ಬಿಟ್ಟು ಆರೋಗ್ಯ ಸಚಿವರು ಚಿತ್ರದುರ್ಗದಲ್ಲಿ ತೇರು ಎಳೆಯೋದ್ರಲ್ಲಿ ಬ್ಯುಸಿಯಾಗಿದ್ದರು. ಕೊರೊನಾ ಉಸ್ತುವಾರಿ ಸಚಿವರಾದ ಸುಧಾಕರ್ ತಮ್ಮ ನಿವಾಸದಲ್ಲಿ ಸ್ವಿಮ್ಮಿಂಗ್ ಆಡೋದ್ರಲ್ಲಿ ಬ್ಯುಸಿ ಆಗಿದ್ದರು ಎಂದು ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಹಾಗೂ ಸಚಿವರ ನಡೆಯನ್ನು ಲೇವಡಿ ಮಾಡಿದರು.

Key words:  government-dead-Former MP -R.Dhruvanarayan- mysore