ಆರು ಪತ್ರಕರ್ತರ ಕುಟುಂಬಕ್ಕೆ ತಲಾ 5 ಲಕ್ಷ .ರೂ ಪರಿಹಾರ ಮಂಜೂರು ಮಾಡಿದ ಸಿಎಂ ಬಿಎಸ್ ವೈ…

0
229

ಬೆಂಗಳೂರು,ಆ,21,2020(www.justkannada.in): ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಆರು ಜನ ಪತ್ರಕರ್ತರಿಗೆ ತಲಾ 5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.jk-logo-justkannada-logo

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಭೇಟಿ ಮಾಡಿ ಪತ್ರಕರ್ತರ ನಿಯೋಗ ಸಲ್ಲಿಸಿದ್ದ ಮನವಿಗೆ ಸಿಎಂ ಬಿಎಸ್ ಯಡಿಯೂರಪ್ಪ ಕೂಡಲೇ ಸ್ಪಂದಿಸಿ, ಆದೇಶಿಸಿದ್ದಾರೆ.5-lakhs-six-journalists-family-cm-bs-yeddyurappa-granted

ಪತ್ರಕರ್ತರಾದ ಸೋಮಶೇಖರ್ ಯಡವಟ್ಟಿ, ವೀ.ಸಿ.ಹಿರೇಮಠ, ಕೆ.ಎಂ.ಹಾಲಪ್ಪ, ಪರ್ವತಯ್ಯಸ್ವಾಮಿ, ಎಸ್.ಎಚ್.ಜಯಣ್ಣ, ಬಿ.ಎಂ.ತ್ರಿಮೂರ್ತಿ ಅವರ ಕುಟುಂಬಕ್ಕೆ ಸೌಲಭ್ಯ ದೊರೆಯಲಿದೆ. ಹಿರಿಯ ಪತ್ರಕರ್ತರಾದ ನ.ವಿನಯ್ ,  ಚಿದಾನಂದ ಪಟೇಲ್  ಮತ್ತಿತರರು ನಿಯೋಗದಲ್ಲಿದ್ದರು.

key words: 5 lakhs – six-journalists- family –CM BS YEDDYURAPPA- Granted