ಜಿಲ್ಲೆಯಲ್ಲಿ ಒಂದುವರೆ ಕೋಟಿಗೂ ಅಧಿಕ ಮೊತ್ತದ ಮದ್ಯ ಮತ್ತು 2.20 ಕೋಟಿ  ಮೌಲ್ಯದ  ವಸ್ತುಗಳು ವಶ- ಮೈಸೂರು ಡಿಸಿ ಡಾ.ಕೆವಿ ರಾಜೇಂದ್ರ

ಮೈಸೂರು,ಏಪ್ರಿಲ್,6,2023(www.justkannada.in):  ಮೈಸೂರು ಜಿಲ್ಲೆಯಲ್ಲಿ ಒಂದುವರೆ ಕೋಟಿಗೂ ಅಧಿಕ ಮೊತ್ತದ ಮದ್ಯ, 2.20 ಕೋಟಿ  ಮೌಲ್ಯದ ಬೆಲೆ ಬಾಳುವ  ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ಡಿಸಿ ಡಾ.ಕೆವಿ ರಾಜೇಂದ್ರ ತಿಳಿಸಿದರು.

ಈ ಕುರಿತು ಮಾತನಾಡಿದ ಮೈಸೂರು ಡಿಸಿ ಕೆ.ವಿ ರಾಜೇಂದ್ರ,  ಚುನಾವಣೆ ಅಕ್ರಮ ತಡೆಯಲು ಈಗಾಗಲೇ ಚುನಾವಣಾ ಆಯೋಗದ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದೆ. ಈಗಾಗಲೇ ರಮ್ಮನಹಳ್ಳಿ ಮತ್ತು ಟಿ ನರಸಿಪುರ ಚೆಕ್ ಪೋಸ್ಟ್ ಗಳಲ್ಲಿ 80 ಲಕ್ಷ ಕ್ಕೂ ಹೆಚ್ಚು ಹಣ ಸೀಜ್ ಮಾಡಲಾಗಿದೆ‌.  ಸರ್ಕಾರಿ ಬಸ್ ಗಳಲ್ಲೂ  ಹಣ ಸಾಗಾಟ ಮಾಡಲಾಗುತ್ತಿದೆ. ಇದರ ಬಗ್ಗೆನೂ ಕ್ರಮ ವಹಿಸಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಸುಮಾರು ಒಂದುವರೆ ಕೋಟಿಗೂ ಅಧಿಕ ಮೊತ್ತದ ಮದ್ಯ ವಶಕ್ಕೆ ಪಡೆಯಲಾಗಿದೆ. ಸುಮಾರು 2.20 ಕೋಟಿ  ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಕೂಡ ವಶ ಪಡಿಸಿಕೊಳ್ಳಲಾಗಿದೆ. ಜಿಲ್ಲೆಯ 50 ಚೆಕ್ ಪೋಸ್ಟ್ ಗಳಲ್ಲೂ ಸಿಸಿ ಟಿವಿಗೆ ಕ್ರಮವಹಿಸಲಾಗಿದೆ. ನಾಮಪತ್ರ ಬಳಿಕ ಹೆಚ್ಚಾಗಬಹುದಾದ ಚುನಾವಣಾ ಅಕ್ರಮ ತಡೆಯಲು ಫ್ಲೈಯಿಂಗ್ ಸ್ಕ್ವಾಡ್ ಗಳಿಗೆ ಹೆಚ್ಚಿನ ತರಬೇತಿ ನೀಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ಕೆವಿ ರಾಜೇಂದ್ರ ಹೇಳಿದರು.

Key words: Liquor- goods – seized – district- Mysore DC- Dr. KV Rajendra