ಸಂಸದ ಅನಂತ್ ಕುಮಾರ್ ಹೆಗೆಡೆಯ ಸಂವಿಧಾನ ತಿದ್ದುಪಡಿ ಹೇಳಿಕೆ ಸಮರ್ಥಿಸಿಕೊಂಡ ಸಿ.ಟಿ ರವಿ.

ಚಿಕ್ಕಮಗಳೂರು,ಮಾರ್ಚ್,11,2024(www.justkannada.in): ಸಂವಿಧಾನ ತಿದ್ದುಪಡಿ ಮಾಡುವ ಕುರಿತು ಸಂಸದ ಅನಂತ್ ಕುಮಾರ್ ಹೇಳಿಕೆಯನ್ನ ಮಾಜಿ ಸಚಿವ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಅನಂತ್ ಕುಮಾರ್ ಹೆಗಡೆ ಹೇಳಿರುವುದರಲ್ಲಿ ತಪ್ಪೇನಿದೆ. ಹೆಗಡೆ ಏನು ಹೇಳಿದ್ದಾರೆಂದು ನಾನು ನೋಡಿದೆ.  ಸಂವಿಧಾನವನ್ನ 106 ಬಾರಿ ತಿದ್ದುಪಡಿ ಮಾಡಲಾಗಿದೆ.  ಆದರೆ 95 ಬಾರಿ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್. ಇದು ರಾಮನ ಭೂಮಿ ಅಂತ ಅಂಬೇಡ್ಕರ್ ಅವರಿಗೂ ಗೊತ್ತಿತ್ತು ಎಂದರು.

ಸಂವಿಧಾನ ಬದಲಾಯಿಸಿದರೇ ರಕ್ತಪಾತವಾಗುತ್ತೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಟಿ ರವಿ, ರಕ್ತಪಾತ ಆಗುವ ಪ್ರಶ್ನೆಯೇ ಇಲ್ಲ . ಜಗತ್ತಿನ ಯಾವ ಶಕ್ತಿಯೂ ಸಂವಿಧಾನ ಬದಲಿಸಲು ಆಗಲ್ಲ  ಕಾಂಗ್ರೆಸ್ ಅಂಬೇಡ್ಕರ್ ಸಂವಿಧಾನಕ್ಕೆ ಅಪಚಾರ ಮಾಡಿದೆ.  ಸಂವಿಧಾನ ತಿದ್ದುಪಡಿಗೆ ಸಂವಿಧಾನದಲ್ಲೇ ಅವಕಾಶವಿದೆ ಎಂದು ಸಿ ಟಿ ರವಿ ತಿಳಿಸಿದರು.

Key words:  CT Ravi -defended –MP- Ananth Kumar Hegede- constitutional- amendment -statement.