ಅಪಘಾತ ಮತ್ತು ಮಹಿಳೆಗೆ ಹಲ್ಲೆ ಆರೋಪ : ಕಿರುತೆರೆ ನಟಿ ವಿರುದ್ಧ ಪೊಲೀಸರಿಗೆ ದೂರು.

Police  ̲  case  ̲ against  ̲  actress  ̲  Lakshmi siddaiah  ̲ assaulting  ̲  women ̲ Bangalore

ಬೆಂಗಳೂರು, ಮಾ.೧೧, ೨೦೨೪ :  ಕನ್ನಡ ಕಿರುತೆರೆ ನಟಿ ಲಕ್ಷ್ಮಿ ಸಿದ್ದಯ್ಯ  ವಿರುದ್ಧ ಪೊಲೀಸರಿಗೆ ದೂರು.

ಜ್ಞಾನ ಭಾರತಿ ಮೆಟ್ರೋ ನಿಲ್ದಾಣದ ಬಳಿ ರಸ್ತೆಯಲ್ಲಿ ಮಹಿಳೆಯೊಬ್ಬರ ಮೇಲೆ ಅಪಘಾತ ಮತ್ತು ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ ನಟಿ ಲಕ್ಷ್ಮೀ ಸಿದ್ದಯ್ಯ . ಕಳೆದ ವರ್ಷ ಡಿಸೆಂಬರ್ 6 ರಂದು ನಡೆದ ಈ ಘಟನೆ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಇತ್ತೀಚೆಗೆ ಬೆಳಕಿಗೆ ಬಂದಿದೆ.

ದೂರಿನ ಪ್ರಕಾರ, ಲಕ್ಷ್ಮಿಯು ಪಿರ್ಯಾದಿದಾರರ ವಾಹನವನ್ನು ಅತಿವೇಗವಾಗ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಘರ್ಷಣೆಗೆ ಕಾರಣವಾಯಿತು. ವಾಗ್ವಾದದ ಸಮಯದಲ್ಲಿ ನಿಂದನೀಯ ಪದಗಳನ್ನು ಬಳಸುವುದರ ಜೊತೆಗೆ ದೂರುದಾರರ ಮೇಲೆ ಹಲ್ಲೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.

ಮಾಧುರಿ ಮತ್ತು ಆಕೆಯ ಸಹೋದರಿ ಐಶ್ವರ್ಯ ಜ್ಞಾನ ಭಾರತಿ ಮೆಟ್ರೋ ನಿಲ್ದಾಣದ ಬಳಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಅತಿವೇಗದಲ್ಲಿ ಹ್ಯುಂಡೈ ಐ20 ಕಾರನ್ನು ಚಲಾಯಿಸಿಕೊಂಡು ಬಂದ ನಟಿ ಲಕ್ಷ್ಮಿ, ಐಶ್ವರ್ಯಾ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ  ಹಿಂಬದಿಯಿಂದ ಡಿಕ್ಕಿ ಹೊಡೆದು ಕೆಳಗೆ ಬಿಳಿಸಿದ್ದಾರೆ.

ಅಪಘಾತದ ಬಗ್ಗೆ ಲಕ್ಷ್ಮಿಯನ್ನು ಪ್ರಶ್ನಿಸಿದಾಗ, ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದರು ಎಂದು ದೂರಿನಲ್ಲಿ ಹೇಳಿದ್ದಾರೆ. ಜತೆಗೆ ಘಟನೆಯನ್ನು ಮೊಬೈಲ್‌ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಫೋನ್ ಅನ್ನು ಲಕ್ಷ್ಮಿ ಅವರ ಜತೆಗಿದ್ದ ಆನಂದ್ ಕುಮಾರ್ ಎಂಬಾತ ಬಲವಂತದಿಂದ  ವಶಪಡಿಸಿಕೊಂಡರು. ಈ ವೇಳೆ ಅವರು ನಿಂದನೀಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳಾ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಸಹೋದರಿಯರು ಆರೋಪಿಸಿದ್ದಾರೆ.

“ಆನಂದ್ ಕುಮಾರ್ ಅವರು ವಿಡಿಯೋ ರೆಕಾರ್ಡಿಂಗ್ ಅಳಿಸುವಂತೆ ಬೆದರಿಕೆ ಹಾಕಿದರು . ಆದರೆ ನಾವು ನಿರಾಕರಿಸಿದಾಗ ನಮ್ಮ ಫೋನ್ ಜಪ್ತಿ ಮಾಡಿದರು. ಮೊಬೈಲ್ ವಾಪಸ್ ಕೊಡಿಸುವಂತೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ, ಆದರೆ ಮೂರು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಐಶ್ವರ್ಯಾ ಹೇಳಿದ್ದಾರೆ.

ಲಕ್ಷ್ಮಿ ಸಿದ್ದಯ್ಯ ಮತ್ತು ಅವರ ಜತೆಗಿದ್ದಾತನ  ವಿರುದ್ಧ ಮಾಡಿರುವ ಆರೋಪಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು  ಪ್ರಕರಣ ತನಿಖೆಯ ಹಂತದಲ್ಲಿದೆ.

ಕೃಪೆ : ಟೈಮ್ಸ್‌ ಆಫ್‌ ಇಂಡಿಯಾ.

key words : Police  ̲  case  ̲ against  ̲  actress  ̲  Lakshmi siddaiah  ̲ assaulting  ̲  women ̲ Bangalore