ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆದ್ರೆ ಲೈಸೆನ್ಸ್ ರದ್ದು- ಸಚಿವ ಸಂತೋಷ್ ಲಾಡ್ ಎಚ್ಚರಿಕೆ.

ಹುಬ್ಬಳ್ಳಿ,ಜುಲೈ,25,2023(www.justkannada.in):  ರಾಜ್ಯದಲ್ಲಿ ‘ಗೃಹಲಕ್ಷ್ಮೀ’ ಯೋಜನೆಗೆಅರ್ಜಿ ಸಲ್ಲಿಸಲು ಯಾರೇ ಹಣ ಪಡೆದರೆ ಅವರ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಚ್ಚರಿಕೆ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ  ಪಾವತಿಸುವಂತಿಲ್ಲ. ನನ್ನ ಕ್ಷೇತ್ರದ ಕೆಲವು ಕೇಂದ್ರಗಳಿಗೆ ಭೇಟಿ ನೀಡಿದ್ದೇನೆ. ಯಾರಾದರೂ ಹಣ ಪಡೆದ ಬಗ್ಗೆ ಮಾಹಿತಿ ಬಂದರೇ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಹೇಳಿದರು.

ಧಾರಾವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್​ ಇಂದು (ಜು.25) ಬೆಳಂಬೆಳಗ್ಗೆ ಹುಬ್ಬಳ್ಳಿಯಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಧಾರಾವಾಡ ಜಿಲ್ಲೆಯಲ್ಲಿ ಮಳೆಗೆ 100ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ಅಂದಾಜು ನಮಗೆ ಸಿಕ್ಕಿಲ್ಲ. ಮಳೆ ಇನ್ನೂ ಹೆಚ್ಚಾದರೆ ರೈತರಗೆ ಅನಾನುಕೂಲ ಆಗಲಿದೆ. ಧಾರವಾಡ ಜಿಲ್ಲೆಯ ಸ್ಲಂಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು.

ಸರ್ಕಾರ ಬೀಳಿಸಲು ಸಿಂಗಾಪುರದಲ್ಲಿ ತಂತ್ರ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಜೆಪಿಯವರದು ಯಾವಾಗಲೂ ಇಷ್ಟೆ. ಯಾವಾಗ ಸೋಲುತ್ತಾರೆ, ಅಲ್ಲಿಂದ ಸರ್ಕಾರ ಬಿಳಸೋಕೆ ಕೆಲಸ ಆರಂಭಿಸುತ್ತಾರೆ. ಹೇಗೆ ಸರ್ಕಾರ ಬೀಳಸಬೇಕು ಎಂದು ಬಿಜೆಪಿ ಮನಿಫ್ಯಾಕ್ಚರಿಂಗ್ ಯುನಿಟ್ ಕೆಲಸ ಮಾಡತ್ತೆ ಎಂದು ವಾಗ್ದಾಳಿ ನಡೆಸಿದರು.

Key words: License- canceled -money – received – apply – Grilahakshmi Yojana-Minister -Santosh Lad