Monday, September 21, 2026

BDA Apartments

ಎರಡೇ ತಿಂಗಳಲ್ಲಿ ಸಿದ್ಧರಾಮಯ್ಯ ಸರ್ಕಾರ ಕುಸಿತ- ಮಾಜಿ ಸಚಿವ ಕೋಟಾ ಶ್ರೀನಿವಾಸ...
Home Front Page ಎರಡೇ ತಿಂಗಳಲ್ಲಿ ಸಿದ್ಧರಾಮಯ್ಯ ಸರ್ಕಾರ ಕುಸಿತ- ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಟೀಕೆ.

ಎರಡೇ ತಿಂಗಳಲ್ಲಿ ಸಿದ್ಧರಾಮಯ್ಯ ಸರ್ಕಾರ ಕುಸಿತ- ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಟೀಕೆ.

ಬೆಂಗಳೂರು,ಜುಲೈ,25,2023(www.justkannada.in): ಎರಡೇ ತಿಂಗಳಲ್ಲಿ ಸಿದ್ಧರಾಮಯ್ಯ ಸರ್ಕಾರ ಕುಸಿತ ಕಂಡಿದೆ. ಒಂದು ಕಡೆ ಬರ ಆಗಿದೆ. ಮತ್ತೊಂದು ಕಡೆ ಪ್ರವಾಹ ಉಂಟಾಗಿದೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, ಬೆಲೆ ಏರಿಕೆಯಿಂದಲೂ ರಾಜ್ಯದ ಜನರು ತೊಂದರೆ ಪಡುತ್ತಿದ್ದಾರೆ.  ಕಾನೂನು ಸುವ್ಯವಸ್ಥೆ ಸಂಫೂರ್ಣವಾಗಿ ಹದಗೆಟ್ಟಿದೆ. ಎಂಎಲ್ ಸಿ ಹರಿಪ್ರಸಾದ್ ಸಿಎಂ ಇಳಿಸುವ ಮಾತನಾಡುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸಿಂಗಾಪುರ ಅಪರೇಷನ್ ಅಂತಿದ್ದಾರೆ. ಸರ್ಕಾರದ ವೈಪಲ್ಯ ಮುಚ್ಚಲು ವಿಪಕ್ಷಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಎರಡೇ ತಿಂಗಳಲ್ಲಿ ಸಿದ್ಧರಾಮಯ್ಯ ಸರ್ಕಾರ ಕುಸಿತ kota

ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಚಿವರ ವಿರುದ್ದ ಶಾಸಕರು ದೂರು ನೀಡಿದ್ದಾರೆ. ಈ ಸರ್ಕಾರದಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದು  ಕೋಟ ಶ್ರೀನಿವಾಸ್ ಪೂಜಾರಿ ಹರಿಹಾಯ್ದರು.

Key words: Siddaramaiah -government – two months- former minister -Kota Srinivas Pujari