Thursday, August 20, 2026

BDA Apartments

Home Front Page ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದ ಮೊಹಮ್ಮದ್ ಶಮಿ

ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದ ಮೊಹಮ್ಮದ್ ಶಮಿ

ಬೆಂಗಳೂರು ಡಿಸೆಂಬರ್ 23, 2019 (www.justkannada.in): ಮೊಹಮ್ಮದ್ ಶಮಿ ಕೂಡ ವರ್ಷವೊಂದರಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಅನ್ನೋ ದಾಖಲೆಯನ್ನ ಬರೆದಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಶೇಯ್ ಹೋಪ್​ರನ್ನ ಬೌಲ್ಡ್ ಮಾಡುವ ಮೂಲಕ ಒಟ್ಟು 42 ವಿಕೆಟ್ ಕಬಳಿಸಿ ಈ ದಾಖಲೆ ಬರೆದ್ರು. ಅಲ್ಲದೆ ತಮ್ಮ ಕರಿಯರ್​ನಲ್ಲಿ ಎರಡು ಬಾರಿ ಈ ದಾಖಲೆ ಬರೆದ ಮೊದಲ ಬೌಲರ್ ಕೂಡ ಶಮಿ.

ಈ ವರ್ಷ 21 ಪಂದ್ಯಗಳಲ್ಲಿ 42 ವಿಕೆಟ್​ಗಳನ್ನ ಶಮಿ ಪಡೆದಿದ್ದಾರೆ. ಇದರಲ್ಲಿ ಎರಡು ಬಾರಿ 4 ವಿಕೆಟ್​ಗಳ ಗೊಂಚಲು ಹಾಗೂ ಒಮ್ಮೆ 5 ವಿಕೆಟ್ ಪಡೆದ ಸಾಧನೆಯನ್ನ ಮಾಡಿದ್ದಾರೆ. ಇನ್ನು, ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಶಮಿ ಹ್ಯಾಟ್ರಿಕ್ ಕೂಡ ಪಡೆದು ಸಂಭ್ರಮಿಸಿದ್ರು.