ಮೈಸೂರಿನಲ್ಲಿ ವಕೀಲೆ ಅನುಮಾನಸ್ಪದ ಸಾವು..

ಮೈಸೂರು,ಮಾರ್ಚ್,12,2022(www.justkannada.in):  ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ವಕೀಲೆ ಅನುಮಾನಸ್ಪದ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ರಾಮಕೃಷ್ಣ ನಗರದ ನಿವಾಸಿ ವಕೀಲೆ ಚಂದ್ರಕಲಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ವರ್ಷಗಳ ಹಿಂದೆ ಪ್ರದೀಪ್ ಎಂಬುವವರನ್ನು ಚಂದ್ರಕಲಾ ಮದುವೆಯಾಗಿದ್ದರು. ದಂಪತಿಗೆ ಒಂದು ವರ್ಷದ ಮಗು ಇತ್ತು. ಹಣದ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

ಈ ನಡುವೆ ಕಳೆದ ತಿಂಗಳ ಹಿಂದೆ ಗಂಡ ಪ್ರದೀಪ್ ರಿಂದ ಕೊಲೆ ಯತ್ನ ಆರೋಪ ಕೇಳಿ ಬಂದಿತ್ತು. ಇದೀಗ ವಕೀಲೆ ಚಂದ್ರಕಲಾ ಆತ್ಮಹತ್ಯೆ ಅನುಮಾನಕ್ಕೆ ಕಾರಣವಾಗಿದೆ. ಗಂಡ, ಅತ್ತೆ ಮಾವ ಸೇರಿ ಚಂದ್ರಕಲಾ ಕೊಲೆ ಮಾಡಿದ್ದಾರೆಂದು ಚಂದ್ರಕಲಾ ಕುಟುಂಬಸ್ಥರು ದೂರು ನೀಡಿದ್ದಾರೆ.  ಸ್ಥಳಕ್ಕೆ ಕುವೆಂಪು ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಾಹಗಿದೆ.

Key words: Lawyer-suspects-death-Mysore