ಅನಧಿಕೃತ ನೀರಿನ‌ ಸಂಪರ್ಕ ಕೂಡಲೇ ಅಧಿಕೃತಗೊಳಿಸಿಕೊಳ್ಳಿ-ಮೈಸೂರು ಮಹಾನಗರ ಪಾಲಿಕೆ ಸೂಚನೆ.

ಮೈಸೂರು,ಮಾರ್ಚ್,12,2022(www.justkannada.in): ಅನಧಿಕೃತವಾಗಿ ನೀರಿನ‌ ಸಂಪರ್ಕ ಪಡೆದಿದ್ದರೆ ಕೂಡಲೇ ಅಧಿಕೃತಗೊಳಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮೈಸೂರು ಮಹಾನಗರ ಪಾಲಿಕೆ  ಸೂಚನೆ ನೀಡಿದೆ.

ಏಳು ದಿನಗಳ ಒಳಗೆ ವಾಣಿವಿಲಾಸ ನೀರು ಸರಬರಾಜು ಕೇಂದ್ರಕ್ಕೆ ಹೋಗಿ ಅಗತ್ಯ ದಾಖಲೆ ಸಲ್ಲಿಸಿ. ನೀರಿನ ಸಂಪರ್ಕ ಅಧಿಕೃತ ಗೊಳಿಸಿಕೊಳ್ಳುವಂತೆ ಸೂಚಿಸಿದ್ದು, ಇಲ್ಲದಿದ್ದರೆ ದಂಡದ ಜೊತೆಗೆ ನೀರು ಮತ್ತು ಒಳಚರಂಡಿ ಸಂಪರ್ಕ ಕಟ್ ಆಗಲಿದೆ ಎಂದು ಎಚ್ಚರಿಕೆ ನೀಡಿದೆ.

ಜೊತೆಗೆ ವರ್ಕ್ ಆಗದ ವಾಟರ್ ಮೀಟರ್ ಬದಲಾವಣೆ ಮಾಡಿಸಿಕೊಳ್ಳಬೇಕು. ನಾಟ್ ವರ್ಕಿಂಗ್ ಮೀಟರ್ ಗಳ  ಮಿನಿಮಮ್ ವಾಟರ್ ಬಿಲ್ ದುಪ್ಪಟ್ಟಾಗಲಿದೆ. ಕೂಡಲೇ ಮಾಪನ ಸರಿಪಡಿಸಿಕೊಳ್ಳಲು ಪಾಲಿಕೆ ಸೂಚನೆ ‌ನೀಡಿದೆ.

Key words: Immediately –authorize-water connection-mysore