ಡಿ.2 ರಂದು ಲಾಗೈಡ್ 2024ರ ಕ್ಯಾಲೆಂಡರ್, ಡೈರಿ ಬಿಡುಗಡೆ ಮತ್ತು ಪತ್ರಿಕೆ ವೆಬ್ ಆವೃತ್ತಿ ಲೋಕಾರ್ಪಣೆ.

ಮೈಸೂರು,ನವೆಂಬರ್,30,2023(www.justkannada.in): ಡಿಸೆಂಬರ್ 2 ರಂದು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ವತಿಯಿಂದ 2024ರ ಕ್ಯಾಲೆಂಡರ್, ಡೈರಿ ಬಿಡುಗಡೆ ಮತ್ತು ಪತ್ರಿಕೆ ವೆಬ್ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಮೆಟ್ರೋಪೋಲ್ ಹೋಟೆಲ್ , ಜೆಎಲ್ ಬಿ ರಸ್ತೆ, ಮೈಸೂರು ಇಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಸಿ.ಜಿ ಹುನಗುಂದ ಅವರು ಲಾ ಗೈಡ್ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಮಾಡಲಿದ್ದಾರೆ. ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾದ ಸೀನಿಯರ್ ಡೈರೆಕ್ಟರ್ ಕೆ. ವೆಂಕಟೇಶಮೂರ್ತಿ ಅವರು  ಲಾ ಗೈಡ್ ವೆಬ್ ಆವೃತ್ತಿ ಲೋಕಾರ್ಪಣೆ ಮಾಡಲಿದ್ದಾರೆ.

ನಿವೃತ್ತ ಪೊಲೀಸ್ ಮಹಾನಿರೀಕ್ಷಕರಾದ ಡಿ.ಎನ್ ಮುನಿಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಟಿ ದೇವೇಗೌಡ, ಶಾಸಕ ಹಾಗೂ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಪ್ರಧಾನ ಸಂಪಾದಕ ಎ. ಮಂಜು , ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಟಾರ್ ಆಫ್ ಮೈಸೂರು ಹಾಗೂ ಮೈಸೂರು ಮಿತ್ರ ಸಂಸ್ಥಾಪಕ ಸಂಪಾದಕರಾದ ಕೆ.ಬಿ ಗಣಪತಿ ಅವರನ್ನ ಅಭಿನಂದಿಸಲಾಗುತ್ತದೆ.  ಸಿಎಫ್ ಟಿಆರ್ ಐ ವಿಜ್ಞಾನಿ ಶೈಲಜಾ ಧರ್ಮೇಶ್ , ಕನ್ನಡ ಪ್ರಭ ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್ ಅವರವನ್ನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ ಎಂದು ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕರಾದ ಹೆಚ್.ಎನ್ ವೆಂಕಟೇಶ್ ತಿಳಿಸಿದ್ದಾರೆ.

Key words: Launch -LogGuide -2024 calendar- diary -magazine web edition – December 2-mysore