ಕನ್ನಡಿಗಳೆಂದು ತಮಿಳುನಾಡಲ್ಲಿ ಸಿಗದ ನೆರವು: ಅಕ್ಕನ ಚಿಕಿತ್ಸೆಗೆ ನೆರವಾಗಿ ಎಂದು ಮನವಿ ಮಾಡಿದ ನಟಿ ವಿಜಯಲಕ್ಷ್ಮಿ

ಬೆಂಗಳೂರು, ಮೇ 31, 2021 (www.justkannada.in): ನಾನು ಕನ್ನಡಿಗಳೆಂದು ನಮಗೆ ಯಾರು ಸಹಾಯ ಮಾಡುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ನಟಿ ವಿಜಯಲಕ್ಷ್ಮಿ.

ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ನಟಿ, ಕೊರೋನಾ ಸಮಯದಲ್ಲಿ ನನ್ನ ಅಕ್ಕ ಉಷಾ ಆರೋಗ್ಯ ಹದಗೆಟ್ಟಿದೆ. ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ನನ್ನಿಂದ ಆಗುತ್ತಿಲ್ಲ. ಯಾವುದೇ ನಟರು ಸಹಾಯಕ್ಕೆ ಮುಂದೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇದಕ್ಕೆಲ್ಲ ಕಾರಣ ನಟ, ನಿರ್ದೇಶಕ, ರಾಜಕೀಯ ಮುಖಂಡ ಸೀಮನ್ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ.

ನಾನು ಸಹ ಕನ್ನಡದವಳು ಎನ್ನು ಕಾರಣಕ್ಕೆ ತಮಿಳುನಾಡಿನಲ್ಲಿ ಯಾರು ಸಹಾಯಕ್ಕೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ನನ್ನ ಅಕ್ಕನ ಆರೋಗ್ಯ ತೀರ ಗಂಭೀರವಾಗಿದೆ. ಚಿಕಿತ್ಸೆಗೆ ನೆರವು ನೀಡುವಂತೆ ಕೋರಿದ್ದಾರೆ.