Sunday, September 6, 2026

BDA Apartments

Home Front Page ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ಪ್ರಧಾನಿ ಮೋದಿ ಕ್ಷಮೆ ಕೇಳಲಿ- ರಾಹುಲ್ ಗಾಂಧಿ ಆಗ್ರಹ

ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್: ಪ್ರಧಾನಿ ಮೋದಿ ಕ್ಷಮೆ ಕೇಳಲಿ- ರಾಹುಲ್ ಗಾಂಧಿ ಆಗ್ರಹ

ನವದೆಹಲಿ,ಜುಲೈ,21,2026 (www.justkannada.in):  ನೀಟ್ ಅಕ್ರಮ ವಿರೋಧಿಸಿ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಿರುವ ಕ್ರಮವನ್ನ ಖಂಡಿಸಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಂಸತ್ ಭವನದ ಬಳಿ ಮಾತನಾಡಿದ ರಾಹುಲ್ ಗಾಂಧಿ,   ನಿನ್ನೆ ನಡೆದ ಘಟನೆಗೆ ಪ್ರಧಾನಿ ಮೋದಿ ಕ್ಷಮೆ ಕೂಡ ಕೇಳಿಲ್ಲ. ಶಿಕ್ಷಣ, ಪರೀಕ್ಷಾ ವ್ಯವಸ್ತೇ ವಿರುದ್ದ ಯುವಕರು ಪ್ರತಿಭಟಿಸುತ್ತಿದ್ದಾರೆ.  ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆ ಗೆದ್ದಲು ಹಿಡಿದು ಒಳಗಿನಿಂದಲೇ ಪೊಳ್ಳಾಗಿದೆ ಎಂದು ಇಡೀ ವಿಶ್ವಕ್ಕೆ ತಿಳಿದಿದೆ ಎಂದು ಕಿಡಿಕಾರಿದರು.

ವಿದ್ಯಾರ್ಥಿಗಳಿಗೆ ಮೋದಿ ಕ್ಷಮೆಯಾಚಿಸಬೇಕು. ಮೋದಿ ಏಕೆ ಮೌನವಾಗಿದ್ದಾರೆ?  ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವ ಅಸಂಬದ್ದ ಕ್ರಮವನ್ನ ನಿಲ್ಲಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

Key words: Lathi charge, students, PM Modi, Rahul Gandhi