ಭೂ ಹಗರಣ ಹೊರಗೆ ಬರುತ್ತೆ, ಸಿಕ್ಕಿಬೀಳ್ತೀವಿ ಎಂಬ ಭಯದಿಂದ ಪಿತೂರಿ ಮಾಡಿ ಡಿಸಿ ವರ್ಗಾವಣೆ- ವಾಟಾಳ್ ನಾಗರಾಜ್ ಆಕ್ರೋಶ.

ಮೈಸೂರು,ಜೂನ್,7,2021(www.justkannada.in): ಮೈಸೂರು ಜಿಲ್ಲಾಧಿಕಾರಿಯಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೋಹಿಣಿ ಸಿಂಧೂರಿ ಅವರನ್ನ ವರ್ಗಾವಣೆ ಮಾಡಿದ್ಧನ್ನ ಖಂಡಿಸಿ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.jk

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ  ಖಂಡಿಸಿ  ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಡಿಸಿಯ ವರ್ಗಾವಣೆ ಯಾವ ಕಾರಣಕ್ಕೆ ಮಾಡಬೇಕಿತ್ತು..? ಇದರ ಹಿನ್ನಲೆ ಏನು? ಈ ರೀತಿ ತಮ್ಮ ಇಚ್ಛಾನುಸಾರ  ವರ್ಗಾವಣೆ ಮಾಡೋದು ಅತ್ಯಂತ ಅಗೌರವ ಹಾಗೂ ಅಪಾಯದ ಬೆಳವಣಿಗೆ. ಒಂದು ಅಧಿಕಾರಿ ಕನಿಷ್ಟ 3 ವರ್ಷ ಆದರೂ ಇರಬೇಕು. ಆದರೆ 6 ತಿಂಗಳು, 3 ತಿಂಗಳಿಗೆ ವರ್ಗಾವಣೆ ಮಾಡೋದು ಒಳ್ಳೆಯ ಸೂಚನೆಯಲ್ಲ. ಈ ವರ್ಗಾವಣೆ ಹಿಂದೆ ಬಾರಿ ಪಿತೋರಿ ಇದೆ. ದೊಡ್ಡ ಜಾಲವೇ ಅಡಗಿದೆ. ಇವರು ಡಿಸಿ ಆಗಿ ಇದ್ದರೆ ಭೂ ಹಗರಣ ಹೊರಗೆ ಬರುತ್ತೆ ಅಕ್ರಮ ಮಾಡಿರುವ ಜನರು ಸಿಕ್ಕಿ ಬಿಳ್ಳುತ್ತಾರೆ. ಎಲ್ಲವೂ ಸೇರಿ ಸುಮಾರು 6 ತಿಂಗಳಿಂದ ಪಿತೂರಿ ಶುರುವಾಗಿದೆ ಎಂದು ಆರೋಪಿಸಿದರು.

ಡಿಸಿಯವರು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ. ಸಿಎಂ ಒತ್ತಡಕ್ಕೆ ಒಳಗಾಗಿ ವರ್ಗಾವಣೆ ಮಾಡಿರೋದು ಕೆಟ್ಟ ಪರಿಣಾಮ ಬೀರುತ್ತೆ. ಯಾವ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಿದಿರಿ ? ಏನು ಲೂಟಿ ದರೋಡೆ ಆಗಿತ್ತು. ಅವರ ವರ್ಗಾವಣೆ ಮಾಡಲಿಕ್ಕೆ ಗುಂಪೇ ಹೆಚ್ಚಾಯಿತು. ಯಾರು ವಿರುದ್ದವಾಗಿ ಮಾತನಾಡಲಿಲ್ಲ. ಮೈಸೂರು ಆಡಳಿತಕ್ಕೆ ರೋಹಿಣಿ ಸಿಂಧೂರಿಯಂತಹ ಅಧಿಕಾರಿ ಬೇಕು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ಕಾರ್ಯದರ್ಶಿ ಏನು ವರದಿ ನೀಡಿದ್ದಾರೆ. ಅಧಿಕಾರಿಗಳಿಗೆ ಸರ್ಕಾರದಲ್ಲಿ ಭದ್ರತೆ ಇಲ್ಲ. ನೀವೂ ಹೇಳಿದ ಕೆಲಸ ಮಾಡಬೇಕು, ನಿಮ್ಮ ಎಜಂಟರಾ ಗುಲಾಮರಾಗಿರಬೇಕಾ…? ಜಿಲ್ಲಾ ಮಂತ್ರಿಗಳಿಗೆ ಕೈ ಮುಗಿದು ನಿಲ್ಲಬೇಕು. ಏನು ನಿರೀಕ್ಷಣೆ ಮಾಡುತ್ತೀರಾ. ಅವರ ವರ್ಗಾವಣೆ ಮಾಡ ಬೇಕಾದರೆ ಏನು ವರದಿ ಬಂತು ಬಹಿರಂಗ ಮಾಡಿ. ತರಾತುರಿಯಲ್ಲಿ ಭಾನುವಾರವೇ ಬಂದು ಅಧಿಕಾರ ತೆಗೆದುಕೊಳಬೇಕು..? ಏನಿದು, ನಿಮ್ಮ ಮಂತ್ರಿಗಳು ಪಾರ್ಟಿಯವರು ಹೇಳಿದರೆ ವರ್ಗಾವಣೆ ಮಾಡಬೇಕಾ..? ಒಬ್ಬ ಐಎಎಸ್ ಅಧಿಕಾರಿಗಳಿಗೆ ಯಾವ ರಕ್ಷಣೆ ಕೊಟ್ಟಿದ್ದೀರಿ…? ಜಾತಿ ಹೆಸರು ಯಾವ ಜಾತಿ ಮುಖ್ಯಮಂತ್ರಿ ಆಗುತ್ತಾರೆ ಆಜಾತಿ ರವರನ್ನ ಉನ್ನತ ಜಾಗದಲ್ಲಿ ಕೋರಿಸೋದು, ನಾಚಿಕೆ ಆಗುತ್ತೆ. ಮತ್ತೆ ಅವರನ್ನ ಮನವಿ ಮಾಡಿ ಬನ್ನಿ ಎಂದು ಹೇಳಲ್ಲ. ಅವರ ವರ್ಗಾವಣೆ ಆಗಭಾರದಿತ್ತು ಅಷ್ಟೇ. ಇದು ನಡೆಯ ಬಾರದಿತ್ತು. ರೋಹಿಣಿ ವರ್ಗಾವಣೆಯನ್ನ ಯಾವ ರಾಜಕಾರಣಿಯೂ ವಿರೋಧಿಸಲಿಲ್ಲ. ಕಚ್ಚಾಡೋದು ಅಧಿಕಾರಿಗಳು ಕಚ್ಚಾಟ ಅಂದರೆ, ಅದರ ಹಿಂದೇನು ಅಂತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಚಾಮರಾಜನಗರದಲ್ಲಿ 24 ಜನ ಸತ್ತರು. ಆದರೆ ಆ ಡಿಸಿ ಚೇಂಜ್ ಆಗಲ್ಲಿಲ್ಲ. ಇವ್ರನ್ನ ಯಾಕೆ ವರ್ಗಾವಣೆ ಮಾಡಿದ್ರಿ..? ಎಂದು ಸರ್ಕಾರಕ್ಕೆ ವಾಟಾಳ್ ನಾಗರಾಜ್ ಪ್ರಶ್ನಿಸಿದರು.

Key words: land scam- DC transfers – conspiring – fear –kannda fighter-Vatal Nagaraj -protest