ರೋಹಿಣಿ ಸಿಂಧೂರಿ ಆದೇಶಕ್ಕೆ ಸೆಡ್ಡು ಹೊಡೆದ ನೂತನ ಡಿಸಿ ಡಾ.ಬಗಾದಿ ಗೌತಮ್: ಸಂಪೂರ್ಣ ಲಾಕ್ ಡೌನ್ ಆದೇಶ ವಾಪಸ್.

ಮೈಸೂರು,ಜೂನ್,7,2021(www.justkannada.in): ಕೊರೋನಾ ಹಿನ್ನೆಲೆ  ಮೈಸೂರು ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಅವರು ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನ ಇದೀಗ ನೂತನ ಡಿಸಿ ಡಾ.ಬಗಾದಿ ಗೌತಮ್ ಹಿಂಪಡೆದಿದ್ದಾರೆ.

ನಾಳೆಯಿಂದ 08/06/2021ರಿಂದ ಸರ್ಕಾರದ ಆದೇಶದ ನಿಯಮದಂತೆ ಬೆಳಗ್ಗೆ 06 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ  ಅಗತ್ಯವ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದ್ದು ಈ ಕುರಿತು  ಜಿಲ್ಲಾಧಿಕಾರಿ ಡಾ || ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. ಜೂನ್ 14 ರವರೆಗೂ ಇದೇ ಆದೇಶ ಮುಂದುವರೆಯಲಿದೆ.

ಈ ಮೂಲಕ ಮೈಸೂರಿನಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಿಕೆಯಾಗಿದೆ.  ನಾಳೆಯಿಂದ ಜೂನ್ 14ರವರೆಗೆ ಪ್ರತಿದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ವರ್ಗಾವಣೆಗೂ ಮುನ್ನ ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶವನ್ನ ನೂತನ ಡಿಸಿ ಬಗಾದಿ ಗೌತಮ್ ವಾಪಸ್ ಪಡೆದಿದ್ದಾರೆ.  ಈ ಹಿಂದೆ ವಾರದಲ್ಲಿ ಮೂರು ದಿನ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಿ ರೋಹಿಣಿ ಸಿಂಧೂರಿ ಆದೇಶಿದ್ದರು.  ಇದೀಗ ಆದೇಶ ಹಿಂಪಡೆಯುವ ಮೂಲಕ ರೋಹಿಣಿ ಸಿಂಧೂರಿಗೆ  ನೂತನ ಡಿಸಿ ಬಗಾದಿ ಗೌತಮ್ ಸೆಡ್ಡು ಹೊಡೆದಿದ್ದಾರೆ.

Key words: mysore- new DC- Dr. Bagadi Gautam,-complete-lockdown- order – back.