ಗ್ರೇಡೆಡ್ ಪೇ ನೌಕರಿಗೆ ಮಧ್ಯಂತರ ಪರಿಹಾರ ಭತ್ಯೆಗೆ ಸರಕಾರದ ತಡೆ .!

ksou ̲ mysore ̲ graded ̲ pay ̲ scale ̲ Karnataka

 

ಮೈಸೂರು, ಫೆ.೧೪, ೨೦೨೪ :  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗ್ರೇಡೆಡ್ ಪೇ ನೌಕರಿಗೆ ಮೂಲವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಭತ್ಯೆ ನೀಡುವನಿರ್ಣಯಕ್ಕೆ ರಾಜ್ಯ ಸರಕಾರ ತಡೆಯೊಡ್ಡಿದೆ.

ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶಶಿಕಲಾ ಸಿ,  ಅವರು ಫೆ. ೦೩ ರಂದು ಮುಕ್ತ ವಿವಿ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಒಟ್ಟು ಸಾರಾಂಶ ಹೀಗಿದೆ…

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದಿನಾಂಕ:01.12.2023ರಂದು ನಡೆದ ವ್ಯವಸ್ಥಾಪನ ಮಂಡಳಿ 175ನೇ ಸಾಮಾನ್ಯ ಸಭೆಯಯಲ್ಲಿ ತೆಗೆದುಕೊಂಡ ನಿರ್ಣಯದ ನಡವಳಿಗೆ ಸಂಬಂಧಿಸಿದಂತೆ, ಉಲ್ಲೇಖಿತ ಸುತ್ತೋಲೆಯ ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.

ದಿನಾಂಕ:01.12.2023ರಂದು ನಡೆದ ವ್ಯವಸ್ಥಾಪನ ಮಂಡಳಿ 175ನೇ ಸಾಮಾನ್ಯ ಸಭೆಯಲ್ಲಿ ವಿಶ್ವವಿದ್ಯಾಲಯದ 121 ಗ್ರೇಡೆಡ್ ಪೇ ನೌಕರರುಗಳಿಗೆ ಮೂಲವೇತನದ ಶೇಕಡ 17ರಷ್ಟು ಮಧ್ಯಂತರ ಪರಿಹಾರ ಭತ್ಯೆಯನ್ನು 2023ರ ಡಿಸೆಂಬರ್ ಮಾಹೆಯಿಂದ ಜಾರಿಗೆ ಬಂದಂತೆ ನೀಡಲು ತೀರ್ಮಾನಿಸಲಾಗಿರುತ್ತದೆ.

ಆದರೆ, ಉಲ್ಲೇಖಿತ ದಿನಾಂಕ:15.12.2023ರ ಆರ್ಥಿಕ ಇಲಾಖೆಯ ಸುತ್ತೋಲೆಯಲ್ಲಿ ಹೊರಸಂಪನ್ಮೂಲ ನೌಕರರುಗಳಿಗೆ ಕಾರ್ಮಿಕ ಇಲಾಖೆಯಿಂದ Minimum Wages Act ಪ್ರಕಾರ ವೇತನ ನಿಗಧಿಪಡಿಸಿ ಹೊರಡಿಸಲಾದ ಅಧಿಸೂಚನೆಗನುಸಾರವಾಗಿ ವೇತನ ನಿಗಧಿಪಡಿಸಲು ಕ್ರಮವಹಿಸುವಂತೆ ತಿಳಿಸಿದೆ.

ಒಂದು ವೇಳೆ, ಈ ಅಧಿಸೂಚನೆಗೆ ವಿರುದ್ಧವಾದ ಅಧಿಕೃತ ಜ್ಞಾಪನ/ಸರ್ಕಾರಿ ಆದೇಶ ಈಗಾಗಲೇ ಹೊರಡಿಸಿದ್ದಲ್ಲಿ, ಕೂಡಲೇ ಹಿಂಪಡೆಯುವಂತೆ ತಿಳಿಸಲಾಗಿರುತ್ತದೆ. ಈ ಅಧಿಸೂಚನೆಗೆ ವಿರುದ್ಧವಾಗಿ ಅಧಿಕೃತ ಜ್ಞಾಪನ/ಸರ್ಕಾರಿ ಆದೇಶ ಈಗಾಗಲೇ ಹೊರಡಿಸಿದ್ದಲ್ಲಿ ಕೂಡಲೇ ಹಿಂಪಡೆಯುವಂತೆ ತಿಳಿಸಲಾಗಿರುತ್ತದೆ.

 

ಆದ್ದರಿಂದ, ಉಲ್ಲೇಖಿತ ಸುತ್ತೋಲೆಯನ್ವಯ ಪರಿಶೀಲಿಸಿ ಸದರಿ ಸಭೆಯಲ್ಲಿನ ನಡವಳಿಯಲ್ಲಿರುವಂತೆ ಚರ್ಚಿಸಿ ನಿರ್ಣಯ ಕೈಗೊಂಡಿರುವ ಕುರಿತು ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಎಲ್ಲಾ ಅಧಿಸೂಚನೆ/ಆದೇಶ/ಸುತ್ತೋಲೆಗಳನ್ನು ಅನುಸರಿಸಿ ಕ್ರಮವಹಿಸಲಾಗಿರುವ ಕುರಿತು ಸಂಬಂಧಪಟ್ಟ ವಿಷಯಗಳಿಗೆ ಅಂಶವಾರು ಅಗತ್ಯ ದಾಖಲೆಗಳೊಂದಿಗೆ ವರದಿ ಸಲ್ಲಿಸುವಂತೆ ತಿಳಿಸಲು ನಿರ್ದೇಶಿತನಾಗಿದ್ದೇನೆ.

ಕುಲಪತಿ ಸ್ಪಷ್ಟನೆ :

ಸರಕಾರದ ಈ ಆದೇಶದ ಬಗ್ಗೆ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಅವರನ್ನು ಜಸ್ಟ್‌ ಕನ್ನಡ ಸಂಪರ್ಕಿಸಿದಾಗ, ಸರಕಾರದ ಆದೇಶ ತಲುಪಿದೆ. ಅದನ್ನು ಪಾಲಿಸಲಾಗುತ್ತದೆ.  ವ್ಯವಸ್ಥಾಪನ ಮಂಡಳಿಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಇನ್ನು ಯಾವುದೇ ಅಧಿಕೃತ ಜ್ಞಾಪನ/ಸರ್ಕಾರಿ ಆದೇಶವನ್ನು ವಿಶ್ವವಿದ್ಯಾನಿಲಯ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Key words : ksou ̲ mysore ̲ graded ̲ pay ̲ scale ̲ Karnataka