ಪ್ರತಾಪ್ ಸಿಂಹ ಒನ್ ಮ್ಯಾನ್ ಶೋ ಕೊಡುತಿದ್ದಾರೆ: ಈ ಬಾರಿ ಟಿಕೆಟ್ ನೀಡದಂತೆ ಹೈಕಮಾಂಡ್ ಗೆ ಪತ್ರ ಬರೆಯುತ್ತೇವೆ- ಬಿಜೆಪಿ ಮುಖಂಡ ವಾಗ್ದಾಳಿ.

ಮೈಸೂರು,ಅಕ್ಟೋಬರ್,11,2023(www.justkannada.in): ಮಹಿಷಾ ದಸರಾ ಹಿನ್ನಲೆ  ಚಾಮುಂಡಿ ಚಲೋ ವಿಚಾರ ಸಂಬಂಧ ಸಂಸದ ಪ್ರತಾಪ್ ಸಿಂಹ ವಿರುದ್ಧ ಸ್ವಪಕ್ಷದ ಮುಖಂಡನೇ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಮುಖಂಡ ಗಿರಿಧರ್, ಮೈಸೂರಿನಲ್ಲಿ ಪ್ರತಾಪ್ ಸಿಂಹ ಹಠವ್ ಎಂಬ ಚಳುವಳಿ ಮಾಡುತ್ತೇವೆ. ಪ್ರತಾಪ್ ಸಿಂಹ ಒನ್ ಮ್ಯಾನ್ ಶೋ ಕೊಡುತೀದ್ದಾರೆ. ಚಾಮುಂಡಿ ಚಲೋ ವಿಚಾರವಾಗಿ ಪಕ್ಷದ ಯಾವುದೇ ಹಿರಿಯರು ಕಾರ್ಯಕರ್ತರ ಹಾಗೂ ಮುಖಂಡರ ಜೊತೆ  ಚರ್ಚಿಸದೆ ಏಕಾಂಗಿಯಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಶಾಸಕ ಶ್ರೀವತ್ಸ ಅವರು ಪ್ರತಾಪ್ ಸಿಂಹ ಅವರ ಒತ್ತಡಕ್ಕೆ ಮಣಿದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೆ ಯಾವುದೇ ಅಭಿವೃದಿ ಕೆಲಸಗಳು ಇಲ್ಲದ ಕಾರಣ ಮಹಿಷಾ ದಸರಾ ಮುಂದಿಟ್ಟುಕೊಂಡು ರಾಜಕೀಯ ಮಾಡುತಿದ್ದಾರೆ.ಪ್ರತಾಪ್ ಸಿಂಹರ ಈ ನಡೆ ದಲಿತ ಸಮುದಾಯದ ವಿರೋಧ ವ್ಯಕ್ತಪಡಿಸುತ್ತಿದೆ. ಇದರಿಂದ ಇದು ಮುಂಬರುವ ಚುನಾವಣೆಗೆ ಸಾಕಷ್ಟು ತೊಂದರೆ ಉಂಟಾಗುತದೆ ಎಂದು ಕಿಡಿಕಾರಿದರು.

ಕಷ್ಟಪಟ್ಟು ಕಟ್ಟಿರುವ ಪಕ್ಷವನ್ನು ಪ್ರತಾಪ್ ಸಿಂಹ ಹಾಳು ಮಾಡುತಿದ್ದಾರೆ. ಒಂದು ವೇಳೆ ಸಂಘರ್ಷವಾಗಿ ಕಾರ್ಯಕರ್ತರಿಗೆ ಏನಾದರೂ ಆದರೆ ಪ್ರತಾಪ್ ಸಿಂಹನೇ ಹೊಣೆ. ಬಿಜೆಪಿ ಎಂದರೆ ಪ್ರತಾಪ್ ಸಿಂಹರದ್ದ..? ಪ್ರತಾಪ್ ಸಿಂಹನಿಂದಲೇ ಈ ಬಾರಿ ವಿಧಾನಸಭಾ ಚುನಾವಣೆ ಸೋತಿದ್ದು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹಗೆ ಟಿಕೆಟ್ ಕೊಡಬಾರದೆಂದು ಹೈ ಕಮಾಂಡ್ ಗೆ ಪತ್ರ ಬರೆಯುತ್ತೇವೆ ಎಂದು ಬಿಜೆಪಿ ಮುಖಂಡ ಗಿರಿಧರ್ ಹೇಳಿದರು.

Key words: MP-Pratap simha- one-man show- BJP leader –outrage