ಮಿಷನ್ ಏರ್ ಲಿಫ್ಟ್: ಇಂದು ಕರ್ನಾಟಕಕ್ಕೆ 17 ವಿಮಾನ ಆಗಮನ

ಬೆಂಗಳೂರು, ಮೇ 17, 2020 (www.justkannada.in): ಮೊದಲ ಹಂತದ ವಂದೇ ಭಾರತ್ ಮಿಷನ್ ಯೋಜನೆ ಮೇ 13ಕ್ಕೆ ಅಂತ್ಯವಾಗಿದ್ದು, ಇಂದಿನಿಂದ ಎರಡನೇ ಹಂತದ ಏರ್ ಲಿಫ್ಟ್ ಆರಂಭವಾಗಲಿದೆ.

ಇಂದಿನಿಂದ ಮೇ 22ರ ವರೆಗೆ ಎರಡನೇ ಹಂತದಲ್ಲಿ ವಂದೇ ಭಾರತ್ ಮಿಷನ್ ಏರ್ ಲಿಫ್ಟ್ ನಡೆಯಲಿದೆ. ಈ ಪೈಕಿ ಕರ್ನಾಟಕಕ್ಕೆ ಒಟ್ಟು 14 ದೇಶಗಳಿಂದ 17 ವಿಮಾನಗಳು ಬರಲಿದೆ. ಹಾಗೆಯೇ 149 ವಿಮಾನಗಳು ದೇಶದ 15 ನಗರಗಳಿಗೆ ಆಗಮಿಸಲಿದೆ.

ಸೋಮವಾರ ಒಂದು ವಿಮಾನ ಮಂಗಳೂರಿಗೆ ಬರಲಿದೆ. ಅಮೆರಿಕಾದಿಂದ 3, ಕೆನಡಾದಿಂದ 2, ಯುಎಇ, ಸೌದಿ ಅರೆಬಿಯಾ, ಮಲೇಷಿಯಾ, ಒಮನ್, ಫಿಲಿಪೈನ್ಸ್, ಫ್ರಾನ್ಸ್, ಜರ್ಮನಿ, ಕತಾರ್, ಇಂಡೋನೇಷ್ಯಾ, ಐರ್ಲೆಂಡ್, ಜಪಾನ್ ಮತ್ತು ಆಸ್ಟ್ರೇಲಿಯಾದಿಂದ ತಲಾ ಒಂದೊಂದು ವಿಮಾನಗಳ ವ್ಯವಸ್ಥೆ ಮಾಡಲಾಗಿದೆ.