ಗ್ರೀನ್ ಗೋವಾಕ್ಕೆ ಮತ್ತೆ ಒಕ್ಕರಿಸಿದ ಕೊರೊನಾ

ಪಣಜಿ, ಮೇ 17, 2020 (www.justkannada.in): ಮತ್ತೆ ಗೋವಾ ರಾಜ್ಯಕ್ಕೆ ಕೊರೊನಾ ಸೋಂಕು ಒಕ್ಕರಿಸಿದೆ.

ದೆಹಲಿಯಿಂದ ಗೋವಾಕ್ಕೆ ತೆರಳಿದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಮೇ 13ರ ಬಳಿಕ ರಾಜ್ಯದಲ್ಲಿ 16 ಪ್ರಕರಣ ದಾಖಲಾಗಿದೆ. ಮೊದಲು ಗೋವಾ ರಾಜ್ಯ ಕೊರೊನಾ ಮುಕ್ತ ಎಂದು ಘೋಷಣೆ ಮಾಡಲಾಗಿತ್ತು.

ದೆಹಲಿ-ತಿರುವನಂತಪುರಂ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಗೋವಾಕ್ಕೆ ಆಗಮಿಸಿದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ಗೋವಾ ರಾಜ್ಯವನ್ನು ಕೊರೊನಾ ಮುಕ್ತ ಎಂದು ಘೋಷಣೆ ಮಾಡಲಾಗಿತ್ತು.