Sunday, September 27, 2026

BDA Apartments

ಸಚಿವ ಸಂಪುಟದಿಂದ ಈಶ್ವರಪ್ಪರನ್ನ ವಜಾಗೊಳಿಸಿ- ಹೆಚ್.ಸಿ ಮಹದೇವಪ್ಪ ಆಗ್ರಹ BDA JK_Ad...
Home Front Page ಸಚಿವ ಸಂಪುಟದಿಂದ ಈಶ್ವರಪ್ಪರನ್ನ ವಜಾಗೊಳಿಸಿ- ಹೆಚ್.ಸಿ ಮಹದೇವಪ್ಪ ಆಗ್ರಹ.

ಸಚಿವ ಸಂಪುಟದಿಂದ ಈಶ್ವರಪ್ಪರನ್ನ ವಜಾಗೊಳಿಸಿ- ಹೆಚ್.ಸಿ ಮಹದೇವಪ್ಪ ಆಗ್ರಹ.

ಮೈಸೂರು,ಫೆಬ್ರವರಿ,11,2022(www.justkannada.in):  ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಹೇಳಿಕೆ ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನ ಸಚಿವ ಸಂಪುಟದಿಂಧ ವಜಾಗೊಳಿಸಬೇಕು ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಸಿ ಮಹದೇವಪ್ಪ,  ಸಚಿವ ಈಶ್ವರಪ್ಪ ಹೇಳಿಕೆ ರಾಷ್ಟ್ರದ್ರೋಹಿಯಂತಹ ಕೃತ್ಯ.  ಈಶ್ವರಪ್ಪ  ಹಿರಿಯ ನಾಯಕರಾಗಿ ಈ ರೀತಿ ಹೇಳಿಕೆ ನೀಡಿದ್ದು ತಪ್ಪು. ಅವರನ್ನ ಸಂಪುಟದಿಂದ ಕೈ ಬಿಡಬೇಕು. ರಾಜ್ಯಪಾಲರು ಈಶ್ವರಪ್ಪರನ್ನ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಹಿಜಾಬ್ –ಕೇಸರಿ ಶಾಲು ವಿವಾದ ತಾರಕಕ್ಕೇರಿದ ವೇಳೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

Key words: ks Eshwarappara- Cabinet- HC Mahadevappa