Tuesday, September 22, 2026

BDA Apartments

ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ ಕೆಪಿಎಸ್’ಸಿ! BDA JK_Adv BDA Adv
Home Front Page ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ ಕೆಪಿಎಸ್’ಸಿ!

ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ ಕೆಪಿಎಸ್’ಸಿ!

ಬೆಂಗಳೂರು, ನವೆಂಬರ್ 08, 2023 (www.justkannada.in): ಮುಂದಿನ ವರ್ಷ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗದಿಂದ ಅಂದಾಜು ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದೆ.

ಕರ್ನಾಟಕ ಲೋಕಸೇವಾ ಆಯೋಗ 30 ಇಲಾಖೆಗಳ 3000 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಿದೆ. ಈ ಮೂಲಕ ಉದ್ಯೋಗಾಕ್ಷಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

ವಿವಿಧ ಹಂತದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಡಲು 30 ಇಲಾಖೆಗಳಿಂದ ಪ್ರಸ್ತಾವನೆ ಬಂದಿದ್ದು, ಸುಮಾರು ಮೂರು ಸಾವಿರ ಹುದ್ದೆಗಳು ಇವೆ. ನೇಮಕಾತಿ ಮಾಹಿತಿ ಸಿಕ್ಕರೆ ಅಭ್ಯರ್ಥಿಗಳು ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಕೆ.ಪಿ.ಎಸ್.ಸಿ. ಕೂಡ ಅರ್ಜಿ ಆಹ್ವಾನ, ಪರೀಕ್ಷೆ, ಫಲಿತಾಂಶ, ಆಯ್ಕೆ ಪಟ್ಟಿ ಚಟುವಟಿಕೆಗಳನ್ನು ನಿಗದಿಯಂತೆ ಕಾಲಮಿತಿಯಲ್ಲಿ ಮುಗಿಸಬೇಕಿದೆ ಎಂದು ಕೆ.ಪಿ.ಎಸ್.ಸಿ. ಕಾರ್ಯದರ್ಶಿ ಕೆ.ಎಸ್. ಲತಾ ಕುಮಾರಿ ತಿಳಿಸಿದ್ದಾರೆ.