ಕಾನೂನು ಸುವ್ಯವಸ್ಥೆ ಕಾಪಾಡಿ ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಿದ ಗೃಹಸಚಿವರು: ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ

ಮೈಸೂರು, 06, ಆಗಸ್ಟ್ 2023 (www.justkannada.in): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ನೈತಿಕ ಪೊಲೀಸ್ ಗಿರಿಯನ್ನು ನಿಯಂತ್ರಿಸುವ ವಿಚಾರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೈಗೊಂಡ ಬಿಗಿ ಕ್ರಮವನ್ನು ಸಹಿಸದೆ ವಿಪಕ್ಷಗಳು ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ ಕಿಡಿಕಾರಿದರು.

ಡಾ.ಜಿ.ಪರಮೇಶ್ವರ್ ಯುವ ಸೇನೆ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಹುಟ್ಟುಹಬ್ಬವನ್ನು ಆಚರಿಸಿ ಮಾತನಾಡಿದರು. ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಪರಮೇಶ್ವರ್ ಅವರು ಮೂರನೇ ಬಾರಿಗೆ ಗೃಹ ಸಚಿವರಾದ ಮೇಲೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ಹಲವಾರು ತಪ್ಪು,ಲೋಪಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ.‌ಕಾನೂನು ಸುವ್ಯವಸ್ಥೆ ಕಾಪಾಡಲು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿಯನ್ನು ಕಡಿವಾಣ ಹಾಕಲು ಬಿಗಿಯಾದ ನಿಲುವು ಅನುಸರಿಸಿದಕ್ಕೆ ಸಹಿಸದ ವಿಪಕ್ಷಮುಖಂಡರು ಸಣ್ಣ ವಿಚಾರಗಳನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ‌

ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಹಿರಿಯ ಸಚಿವರಾಗಿ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ.‌‌ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಗೆ ಭಂಗ ತರದಂತೆ ನೋಡಿಕೊಳ್ಳಲು ಕೆಲಸ ಮಾಡುತ್ತಿರುವುದನ್ನು ವಿರೋಧ ಪಕ್ಷದ ನಾಯಕರು ಗಮನಿಸಬೇಕು ಎಂದು ಹೇಳಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ‌ಕೆಲಸ‌‌ ಮಾಡಿ ರಾಜ್ಯಾದ್ಯಂತ ಸುತ್ತಾಡಿ‌ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ‌ರಾಜ್ಯದ ಒಬ್ಬ ಮುತ್ಸದ್ದಿ ರಾಜಕಾರಣಿ ಆಗಿರುವ ಪರಮೃಶ್ವರ್ ಅವರು ಮತ್ತಷ್ಟು ರಾಜಕೀಯ ಶಕ್ತಿ ಹೊಂದಬೇಕು ಎಂದು ಹಾರೈಸಿದರು.

ಉನ್ನತ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದಾಗ ಹಲವಾರು ಸುಧಾರಣೆ ತಂದರು. ಗೃಹಸಚಿವರಾಗಿದ್ದಾಗ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದರು.ಈಗ ಮತ್ತೆ ರಾಜ್ಯದ ಗೃಹಸಚಿವರಾಗಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ನುಡಿದರು. ಕಳೆದ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡ ಬಿಜೆಪಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಮಾಡಿರುವ ಅಕ್ರಮಗಳ‌ ತನಿಖೆಗೆ ಆದೇಶ ನೀಡಿದ್ದರಿಂದ ಭಯಭೀತರಾಗಿದ್ದಾರೆ. ಹಾಗಾಗಿಯೇ ಈಗ‌‌ ಇಲ್ಲದ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದು‌‌ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು. ಡಾ ಜಿ ಪರಮೇಶ್ವರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿ ಮಂಜುನಾಥ್, ವಕೀಲ ಕಾಂತರಾಜ್ ಮಣಿಕಂಠ ಮಹೇಶ್ ಕೆ ಮಹೇಂದ್ರ ದಡದಲ್ಲಿ ಲಿಂಗರಾಜು ಪ್ರಕಾಶ್ ಜಿ ಆರ್ ಮಂಜು ಅವಿ ನಾಶ್ ಮಧು ಅಶೋಕ್ ಪ್ರಜ್ವಲ್ ಕೋಟೆ ಮಂಜು ಮುಂತಾದವರು ಹಾಜರಿದ್ದರು.