Sunday, September 20, 2026

BDA Apartments

ಇನ್ಸ್ಟಾಗ್ರಾಮ್ ನಲ್ಲಿ ಹೊಸ ಮೈಲಿಗಲ್ಲು ಬರೆದ ಕಿಂಗ್ ಕೊಹ್ಲಿ BDA JK_Adv BDA Adv
Home Front Page ಇನ್ಸ್ಟಾಗ್ರಾಮ್ ನಲ್ಲಿ ಹೊಸ ಮೈಲಿಗಲ್ಲು ಬರೆದ ಕಿಂಗ್ ಕೊಹ್ಲಿ

ಇನ್ಸ್ಟಾಗ್ರಾಮ್ ನಲ್ಲಿ ಹೊಸ ಮೈಲಿಗಲ್ಲು ಬರೆದ ಕಿಂಗ್ ಕೊಹ್ಲಿ

ಬೆಂಗಳೂರು, ಮಾರ್ಚ್ 03, 2021 (www.justkannada.in): 

ಪ್ರಮುಖ ಸೋಷಿಯಲ್ ಮೀಡಿಯಾ  ಇನ್‌ಸ್ಟಾಗ್ರಾಮ್‌ನಲ್ಲಿ ಕ್ರಿಕೆಟಿಗ ವಿರಾಟ್ ಕೊಯ್ಲಿ ಹೊಸ ಮೈಲಿಗಲ್ಲು ಬರೆದಿದ್ದಾರೆ.

100 ಮಿಲಿಯನ್ ಫಾಲೋವರ್‌ಗಳನ್ನು ದಾಟಿದ ಮೊದಲ ಭಾರತೀಯ ಸೆಲೆಬ್ರಿಟಿ ಮತ್ತು ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಕಿಂಗ್ ಕೊಯ್ಲಿ ಪಾತ್ರರಾಗಿದ್ದಾರೆ.

ಭಾರತದಲ್ಲಿ ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದು, ನಂತರದ ಸ್ಥಾನದಲ್ಲಿ 60 ಮಿಲಿಯನ್ ಫಾಲೋವರ್​ಗಳನ್ನು ಹೊಂದಿರುವ ಸ್ಟಾರ್ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ.

ವಿರಾಟ್​ ಕೊಹ್ಲಿ ನೂರು ಮಿಲಿಯನ್​ಗೂ ಹೆಚ್ಚು ಫಾಲೋವರ್​ಗಳನ್ನು ಹೊಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ ಟ್ವೀಟ್ ಮಾಡಿದೆ.