Thursday, September 17, 2026

BDA Apartments

ಫೆಬ್ರವರಿಯಲ್ಲಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ರಿಲೀಸ್ ?! BDA JK_Adv BDA Adv
Home Cinema ಫೆಬ್ರವರಿಯಲ್ಲಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ರಿಲೀಸ್ ?!

ಫೆಬ್ರವರಿಯಲ್ಲಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ರಿಲೀಸ್ ?!

ಬೆಂಗಳೂರು, ಅಕ್ಟೋಬರ್ 14, 2023 (www.justkannada.in): ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದ 2024ರ ಫೆಬ್ರವರಿಯಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಬಿಗ್ ಬಾಸ್ ನಡುವೆಯೂ ತಪ್ಪದೇ ಸುದೀಪ್ ಮ್ಯಾಕ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ ಎನ್ನಲಾಗಿದೆ.

ಇನ್ನೊಂದು ವಿಷಯ ಎಂದರೆ ಸುದೀಪ್ ನಿರ್ದೇಶನಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ‘ಮಾಣಿಕ್ಯ’ ಬಿಡುಗಡೆಯಾಗಿ 10 ವರ್ಷಗಳ ನಂತರ ಸುದೀಪ್ ‘ಕೆಕೆ’ ಎಂಬ ಚಿತ್ರಕ್ಕೆ ಆ್ಯಕ್ಸನ್ ಕಟ್ ಹೇಳುತ್ತಿದ್ದಾರೆ.

ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದರೆ ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಆಗುವುದು ಖಚಿತ ಎನ್ನಲಾಗಿದೆ.